ಎಂ.ಕೆ.ಹುಬ್ಬಳ್ಳಿ: ಪಟ್ಟಣದಲ್ಲಿ ಹಿಂದು-ಮುಸ್ಲಿಮರೆಲ್ಲ ಸೇರಿಕೊಂಡು ಮಂಗಳವಾರ ಮೊಹರಂಅನ್ನು ಭಕ್ತಿಯಿಂದ ಆಚರಿಸಿದರು.
ಕಳೆದ ಐದು ದಿನಗಳಿಂದ ಸ್ಥಾಪಿಸಿ, ಪೂಜಿಸಲಾಗಿದ್ದ ಅಲ್ಲಾದೇವರಿಗೆ ಭಕ್ತರು ಕೈಮುಗಿದು ನಮಸ್ಕರಿಸಿದರು. ಬೆಂಕಿಯ ಕೆಂಡಹಾಯ್ದು ಭಕ್ತಿ ಸಮರ್ಪಿಸಿದರು. ಪಟ್ಟಣದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಸೇರಿದ ಪಟ್ಟಣದ ಎಲ್ಲ ಅಲ್ಲಾದೇವರ ಡೋಲಿಗಳ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರು ಸೇರಿ ಭಾವೈಕ್ಯ ಮೆರೆದರು.
ಪಟ್ಟಣದೆಲ್ಲೆಡೆ ಮೆರವಣಿಗೆ ಮಾಡಿ, ಸಂಜೆ ಮಲಪ್ರಭಾ ನದಿಗೆ ಅಲ್ಲಾದೇವರ ಡೋಲಿಗಳು ತೆರಳಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.