ADVERTISEMENT

ಜ್ಞಾನೇಶ್ವರ ಮುನಿ ಮಹಾರಾಜ ನಿಧನ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 15:47 IST
Last Updated 20 ನವೆಂಬರ್ 2024, 15:47 IST
ಜ್ಙಾನೇಶ್ವರ ಮುನಿ ಮಹಾರಾಜ
ಜ್ಙಾನೇಶ್ವರ ಮುನಿ ಮಹಾರಾಜ   

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ದೇವಲಾಪೂರ ಗ್ರಾಮದ ಅಷ್ಟಮ ನಂದೀಶ್ವರ ಕ್ಷೇತ್ರದ ಸಂಸ್ಥಾಪಕ 108 ಜ್ಞಾನೇಶ್ವರ ಮುನಿ ಮಹಾರಾಜ (86) ಬುಧವಾರ ಸಂಜೆ ನಿಧನರಾದರು. ಅವರು ನವೆಂಬರ್ 13ರಂದು ಯಮಸಲ್ಲೇಖನ ವ್ರತ ಸ್ವೀಕರಿಸಿದ್ದರು. ಅಂತಿಮ ದಹನ ಕ್ರಿಯಾ ವಿಧಿ ವಿಧಾನಗಳು ನವೆಂಬರ್ 21ರಂದು  ಬೆಳಿಗ್ಗೆ 11ಕ್ಕೆ ದೇವಲಾಪೂರ ಗ್ರಾಮದ ಅಷ್ಟಮ ನಂದೀಶ್ವರ ಕ್ಷೇತ್ರದಲ್ಲಿ ನಡೆಯಲಿವೆ.

ಅಪಾರ ಭಕ್ತ ಸಮೂಹ ಹೊಂದಿದ್ದ ಮುನಿಗಳು ದೇವಲಾಪೂರ ಗ್ರಾಮದಲ್ಲಿ ಅಷ್ಟಮ ನಂದೀಶ ಕ್ಷೇತ್ರ ಸ್ಥಾಪಿಸಿ ಜ್ಞಾನತೀರ್ಥ ವಿದ್ಯಾಪೀಠ ಶಿಕ್ಷಣ ಸ್ಥಾಪಿಸಿದ್ದರು. ಕುಲಭೂಷಣ ಅಲ್ಪಸಂಖ್ಯಾತರ ಕ್ರೆಡಿಟ್ ಸೊಸೈಟಿ ಸ್ಥಾಪಿಸಿ ಗ್ರಾಮಸ್ಥರ ಆರ್ಥಿಕತೆಗೆ ಅನುಕೂಲ ಮಾಡಿದ್ದರು. ಧಾರವಾಡ, ಬೆಳಗಾವಿ ಜಿಲ್ಲೆಯ ನೂರಕ್ಕೂ ಹೆಚ್ಚು ಗ್ರಾಮಗಳಲ್ಲಿ ಜಿನ ಮಂದಿರಗಳನ್ನು ಕಟ್ಟಿಸಿದ್ದರು. ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ಜಯಕೀರ್ತಿ ವಿದ್ಯಾಪೀಠ, ಸಹಕಾರಿ ಸಂಘ, ಜಿನ ಮಂದಿರಗಳನ್ನು ನಿರ್ಮಿಸಿದ್ದರು. ಅವರು 108 ಸಮೇದ ಶಿಖರಜಿಯ ಯಾತ್ರೆಯನ್ನು 5 ಬಾರಿ ಸಂಘದೊಂದಿಗೆ ಪಾದಯಾತ್ರೆ ಮಾಡಿದ್ದರು.

ಮುನಿಗಳು ಗರಗ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿ ಸ್ವಸಾಧನೆಯಿಂದ ತಹಶೀಲ್ದಾರ್‌ರಾಗಿದ್ದರು. ನಿವೃತ್ತಿ ಬಳಿಕ ಮುನಿ ದೀಕ್ಷೆ ಪಡೆದು ಲೋಕ ಕಲ್ಯಾಣ ಮತ್ತು ಧರ್ಮ ಜಾಗೃತಿಗೆ ತಮ್ಮ ಜೀವನ ಸಮರ್ಪಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.