ADVERTISEMENT

ಮೈಸೂರು ದಸರಾ ಕ್ರೀಡಾಕೂಟ | ಟೆಕ್ವಾಂಡೋ ಸ್ಪರ್ಧೆ: ಅಣ್ಣ– ತಂಗಿಗೆ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 13:25 IST
Last Updated 7 ಅಕ್ಟೋಬರ್ 2024, 13:25 IST
ಟೆಕ್ವಾಂಡೋ ಸ್ಫರ್ಧೆಯಲ್ಲಿ ಚಿನ್ನದ ಪದಕ ಪಡೆದ ಪ್ರತೀಕ ಹಾಗೂ ಶ್ರುತಿ
ಟೆಕ್ವಾಂಡೋ ಸ್ಫರ್ಧೆಯಲ್ಲಿ ಚಿನ್ನದ ಪದಕ ಪಡೆದ ಪ್ರತೀಕ ಹಾಗೂ ಶ್ರುತಿ   

ರಾಯಬಾಗ: ಮೈಸೂರು ದಸರಾ ಕ್ರೀಡಾಕೂಟದಲ್ಲಿ ಬೆಳಗಾವಿ ವಿಭಾಗದಿಂದ ಸ್ಪರ್ಧಿಸಿದ್ದ ಪಟ್ಟಣದ ಪ್ರತೀಕ ಅರ್ಜುನ ಗೊಂಡೆ ಹಾಗೂ ಸಹೋದರಿ ಶ್ರುತಿ ಅರ್ಜುನ ಗೊಂಡೆ ಟೆಕ್ವಾಂಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

82 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ರತೀಕ, ಬೆಂಗಳೂರು ನಗರದ ಸ್ಪರ್ಧಿಯನ್ನು ಸೋಲಿಸಿ ಚಿನ್ನದ ಪದಕ ಪಡೆದರೆ, ಶ್ರುತಿ 62ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಬೆಂಗಳೂರು ಗ್ರಾಮೀಣ ಭಾಗದ ಸ್ಪರ್ಧಿಯನ್ನು ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಪ್ರತೀಕಗೆ ಪಟ್ಟಣದ ಎ.ಕೆ.ಟೆಕ್ವಾಂಡೋ ಅಸೋಷಿಯೇಶನ್‌ನ ಅನಿಲ ಕೊರವಿ ತರಬೇತಿ ನೀಡಿದ್ದರೆ, ಶ್ರುತಿಗೆ ಅಶ್ವ ಟೆಕ್ವಾಂಡೋ ಅಸೋಷಿಯೇಶನ್‌ನ ವಿನಾಯಕ ಮಾನೆ ತರಬೇತಿ ನೀಡಿದ್ದರು.
ತಾಲ್ಲೂಕಿನಲ್ಲಿ ಈ ಅಣ್ಣ ತಂಗಿಯ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.