ADVERTISEMENT

ಪ್ರಕೃತಿ ವಿಕೋ‍ಪಕ್ಕೆ ಮಾನವನೇ ಕಾರಣ: ಸಾಹಿತಿ ಸಿ.ಕೆ. ನಾವಲಗಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 12:11 IST
Last Updated 15 ಅಕ್ಟೋಬರ್ 2018, 12:11 IST
ಬೆಳಗಾವಿಯಲ್ಲಿ ಭಾನುವಾರ ನಡೆದ 91ನೇ ನಾಡಹಬ್ಬ ಉತ್ಸವದಲ್ಲಿ ಸಾಹಿತಿ ಸಿ.ಕೆ. ನಾವಲಗಿ ಮಾತನಾಡಿದರು
ಬೆಳಗಾವಿಯಲ್ಲಿ ಭಾನುವಾರ ನಡೆದ 91ನೇ ನಾಡಹಬ್ಬ ಉತ್ಸವದಲ್ಲಿ ಸಾಹಿತಿ ಸಿ.ಕೆ. ನಾವಲಗಿ ಮಾತನಾಡಿದರು   

ಬೆಳಗಾವಿ: ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಗಿಡ, ಮರ, ಅರಣ್ಯ ಹಾಗೂ ಸುಂದರವಾದ ಪ್ರಕೃತಿಯನ್ನು ಹಾಳು ಮಾಡುತ್ತಿದ್ದಾನೆ. ಇದರ ಪರಿಣಾಮವಾಗಿ ಸಂಭವಿಸುತ್ತಿರುವ ಪ್ರಕೃತಿ ವಿಕೋಪಗಳಿಗೆ ಕಾರಣವಾಗುತ್ತಿದ್ದಾನೆ ಎಂದು ಸಾಹಿತಿ ಸಿ.ಕೆ. ನಾವಲಗಿ ವಿಷಾದಿಸಿದರು.

ಕನ್ನಡ ಸಾಹಿತ್ಯ ಭವನ ಆವರಣದಲ್ಲಿ ಭಾನುವಾರ ನಡೆದ 91ನೇ ನಾಡಹಬ್ಬ ಉತ್ಸವದಲ್ಲಿ ‘ಪ್ರಕೃತಿ ವಿಕೋಪಕ ಪರಿಣಾಮಗಳು’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪರಿಸರ ನಾಶದಿಂದ ಮನುಷ್ಯನ ಬುದ್ಧಿಶಕ್ತಿ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ನಮಗೇ ಉಳಿಗಾಲ ಇಲ್ಲದಂತಾಗುತ್ತದೆ. ಹೀಗಾಗಿ, ಪರಿಸರ ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದರು.

ADVERTISEMENT

ಗುರುಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉತ್ಸವ ಸಮಿತಿ ಅಧ್ಯಕ್ಷ ಡಾ.ಎಚ್‌.ಬಿ. ರಾಜಶೆಖರ, ಸಾಹಿತಿಗಳಾದ ಮೋಹನ ಗುಂಡ್ಲೂರ, ಸಿ.ಕೆ. ಜೋರಾಪುರ, ಪಿ.ಬಿ. ಸ್ವಾಮಿ, ಬಾಳಪ್ಪ ರಾಯಣ್ಣನವರ, ಪ್ರೇಮಾ ಕಾಂಬಳೆ, ಮಹಾಂತೇಶ ಕಂಠಿ, ರಾಜು ಪದ್ಮಣ್ಣವರ, ಬಸವರಾಜ ಜರಳಿ ಇದ್ದರು.

ಹೇಮಾ ಸೋನೊಳ್ಳಿ ನಿರೂಪಿಸಿದರು. ಮಹಾತೇಂಶ ಕಂಠಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.