ADVERTISEMENT

ಅಂಕಲಗಿ: ರೈಲು ಹಳಿಯಲ್ಲಿ ನಡೆದಾಡುತ್ತಿರುವ ಜನರು!

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 16:12 IST
Last Updated 24 ಜುಲೈ 2021, 16:12 IST
ಬಳ್ಳಾರಿ ನಾಲಾ ಪ್ರವಾಹದಿಂದ ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಅಂಕಲಗಿ ಗ್ರಾಮದವರು ಹಳಿಯ ಮೇಲೆ ನಡೆದು ಹೋಗುತ್ತಿದ್ದಾರೆ
ಬಳ್ಳಾರಿ ನಾಲಾ ಪ್ರವಾಹದಿಂದ ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಅಂಕಲಗಿ ಗ್ರಾಮದವರು ಹಳಿಯ ಮೇಲೆ ನಡೆದು ಹೋಗುತ್ತಿದ್ದಾರೆ   

ಅಂಕಲಗಿ (ಗೋಕಾಕ ತಾ.): ಬಳ್ಳಾರಿ ನಾಲಾ ಪ್ರವಾಹದಿಂದ ಗೋಕಾಕ ತಾಲ್ಲೂಕಿನ ಸುಕ್ಷೇತ್ರ ಅಂಕಲಗಿ ಅಡವಿಸಿದ್ಧೇಶ್ವರ ಮಠದ ಸುತ್ತ ನೀರು ಆವರಿಸಿದ್ದು ನಡುಗಡ್ಡೆಯಂತಾಗಿದೆ.

ಅಂಕಲಗಿ, ಅಕ್ಕತಂಗೇರಹಾಳ ಭಾಗದ ಬಹುತೇಕ ಹಳ್ಳಿಗಳ ಬೆಳೆಗಳು ಮುಳುಗಿವೆ. ಜಲಾವೃತವಾದ ಮನೆಗಳ ರೈತರು ದನ–ಕರುಗಳೊಂದಿಗೆ ಸ್ಥಳಾಂತರಗೊಂಡಿದ್ದಾರೆ. ಅಂಕಲಗಿ ಮುಖ್ಯ ರಸ್ತೆಗಳ ಸೇತುವೆಗಳು ಮುಳುಗಡೆಯಾಗಿದ್ದು ಸಂಚಾರ ಸ್ಥಗಿತಗೊಂಡಿದೆ. ಬೆಳಗಾವಿ, ಗೋಕಾಕಕ್ಕೆ ಹೋಗುವ ಅಂಕಲಗಿ, ಗುಜನಾಳ ಗ್ರಾಮಗಳ ಪ್ರಯಾಣಿಕರು ರೈಲು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದುದು ಕಂಡುಬಂತು. ಬಸ್‌ಗಳು ಲಗಮೇಶ್ವರ–ಅಕ್ಕತಂಗೇರಹಾಳ ಮೂಲಕ ಸಂಚರಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT