ADVERTISEMENT

ಇಂಟರ್ನ್‌ಶಿಪ್‌ ಡ್ರೈವ್‌ ಇಂದು

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 16:20 IST
Last Updated 21 ಜೂನ್ 2024, 16:20 IST

ಬೆಳಗಾವಿ: ‘ಇಲ್ಲಿನ ಶಿವಬಸವ ನಗರದ ಎಸ್‌.ಜಿ.ಬಾಳೇಕುಂದ್ರಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಬೆಳಗಾವಿ ಸ್ಟಾರ್ಟಪ್ಸ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಜೂನ್‌ 22ರಂದು ಬೆಳಿಗ್ಗೆ 10ಕ್ಕೆ ಇಂಟರ್ನ್‌ಶಿಪ್‌ ಡ್ರೈವ್‌ ಹಮ್ಮಿಕೊಳ್ಳಲಾಗಿದೆ’ ಎಂದು ಪ್ರಾಚಾರ್ಯ ಬಿ.ಆರ್.ಪಟಗುಂದಿ ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನವೋದ್ಯಮಿಗಳನ್ನು ಪ್ರೋತ್ಸಾಹಿಸುವುದು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ವೇದಿಕೆ ಕಲ್ಪಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, 9 ಸ್ಟಾರ್ಟಪ್‌ಗಳು ಪಾಲ್ಗೊಳ್ಳಲಿವೆ. 300 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಅಗತ್ಯತೆ ಮೇರೆಗೆ ಆಯಾ ಕಂಪನಿಗಳು ಅಭ್ಯರ್ಥಿಗಳನ್ನು ಆರಂಭದಲ್ಲಿ 3 ತಿಂಗಳ ಇಂಟರ್ನ್‌ಶಿಪ್‌ಗೆ ಆಯ್ಕೆ ಮಾಡಿಕೊಳ್ಳಲಿವೆ. ಉತ್ತಮ ಪ್ರದರ್ಶನ ನೀಡುವವರನ್ನು ಸೇವೆಯಲ್ಲಿ ಮುಂದುವರಿಸಲಿವೆ’ ಎಂದರು.

‘ತುರ್ತು ಇಂಡಿಯಾ ಎಲ್‌ಎಲ್‌ಪಿ, ಲೋಕಲ್‌ ವೀವ್‌ಟೆಕ್‌ ಪ್ರೈವೇಟ್‌ ಲಿಮಿಟೆಡ್‌, ಜಬ್ಸಾ ಇನ್ಫೋಟೆಕ್‌ ಪ್ರೈವೇಟ್‌ ಲಿಮಿಟೆಡ್‌, ಶಾಸ್ತಾ ಗ್ಲೋಬಲ್‌ ಫೌಂಡೇಷನ್‌, ರೀಚ್‌ಮಾರ್ಕ್‌ ಸೊಲ್ಯುಷನ್ಸ್‌ ಪ್ರೈವೇಟ್‌ ಲಿಮಿಟೆಡ್‌, ಟ್ರಾಂಕ್ವಿಲ್‌ ಮೆಡಿಕಲ್‌ ಸೊಲ್ಯುಷನ್ಸ್‌ ಪ್ರೈವೇಟ್‌ ಲಿಮಿಟೆಡ್‌, ಅಗ್ನಿಮಿತ್ರ ಪ್ಲಗ್‌–ಇನ್‌ ಎಲ್‌ಎಲ್‌ಪಿ, ಉಯಿಲಾಟೆಕ್‌ ಎಲ್‌ಎಲ್‌ಪಿ, ವಾನ್‌ಲೋಕ(ಬಾಲಾಲೋಕ ಟೆಕ್ನಾಲಜೀಸ್‌) ಪ್ರೈವೇಟ್‌ ಲಿಮಿಟೆಡ್‌ ಎಂಬ ಸ್ಟಾರ್ಟಪ್‌ಗಳು ಭಾಗವಹಿಸಲಿವೆ. ಇವು ಯುವಸಮೂಹದಲ್ಲಿ ವೃತ್ತಿಕೌಶಲ ಅಭಿವೃದ್ಧಿಪಡಿಸಿ, ಅವರ ಭವಿಷ್ಯ ಬೆಳಗಲಿವೆ’ ಎಂದರು.

ಉದ್ಯಮಿಗಳಾದ ಅನಿಲ ಚವ್ಹಾಣ, ಕೃಷ್ಣಾ ಶಿಂಧೆ, ದಳಪತ್‌ ಸಿಂಗ್‌ ಪುರೋಹಿತ, ಹರೀಶ ಟೋಪನ್ನವರ, ಶ್ರೀಪಾದ ಜೋಶಿ, ವೈಭವ ನಿಲಜಕರ, ರಾಜು ಪಾಟೀಲ, ಹರ್ಷಿತ್‌ ರೆಡ್ಡಿ, ಮಲ್ಲಿಕಾರ್ಜುನ ಕರೆಹೊನ್ನ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.