ADVERTISEMENT

ಸಕಾರಾತ್ಮಕ ಸುದ್ದಿಗೆ ಆದ್ಯತೆ ನೀಡಿ: ಶಾಸಕ ನಿಖಿಲ್ ಕತ್ತಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 16:16 IST
Last Updated 29 ಜುಲೈ 2024, 16:16 IST
ಹುಕ್ಕೇರಿಯಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಶಾಸಕ ನಿಖಿಲ್ ಕತ್ತಿ ಮಾತನಾಡಿದರು
ಹುಕ್ಕೇರಿಯಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಶಾಸಕ ನಿಖಿಲ್ ಕತ್ತಿ ಮಾತನಾಡಿದರು    

ಹುಕ್ಕೇರಿ: ಪತ್ರಕರ್ತರು ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ಜನಪ್ರತಿನಿಧಿಗಳನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡುವ ಚಾಕಚಕ್ಯತೆ ಹೊಂದಿರಬೇಕು. ಜಗತ್ತಿನಲ್ಲಿ ನಡೆಯುವ ದಿನನಿತ್ಯದ ಆಗು ಹೋಗುಗಳನ್ನು ಗಮನಿಸಿ ಸಕಾರಾತ್ಮಕ ಹಾಗೂ ಸ್ಥಳೀಯ ಸುದ್ದಿಗಳನ್ನು ನಿಖರವಾಗಿ, ನಿಷ್ಪಕ್ಷವಾಗಿ ಬರೆದು ಜನಮನ್ನಣೆ ಪಡೆಯಬೇಕು ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.

ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ ಮಾತನಾಡಿದರು. ಎಸ್.ಎಸ್.ಎನ್.ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪಿ.ಜಿ.ಕೊಣ್ಣೂರ್ ಉಪನ್ಯಾಸ ನೀಡಿದರು.

ADVERTISEMENT

ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಚೇರಮನ್ ಮಹಾವೀರ ನಿಲಜಗಿ, ರೀಡ್ಸ್ ಅಧ್ಯಕ್ಷ ಅಶೋಕ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಅನ್ನೀಸ್ ವಂಟಮೂರಿ, ತಹಶೀಲ್ದಾರ್ ಮಂಜುಳಾ ನಾಯಕ್, ತಾಲ್ಲೂಕು ಪಂಚಾಯ್ತಿ ಇಒ ಪ್ರವೀಣ ಕಟ್ಟಿ, ಸಂಕೇಶ್ವರ ಪಿಐ ಶಿವಶಂಕರ ಅವುಜಿ, ಎನ್.ಆರ್.ಪಾಟೀಲ್, ಅಶೋಕ ಪಟ್ಟಣಶೆಟ್ಟಿ, ಸತ್ಯಪ್ಪ ನಾಯಿಕ, ಮಂದಾರ ಹವಳ, ರಾಚಯ್ಯ ಹಿರೇಮಠ, ರವಿ ಕಾಂಬಳೆ, ಹಿರೇಮಠ ಚಂದ್ರಶೇಖರ್ ಸ್ವಾಮೀಜಿ, ಟಿಎಚ್ಒ ಡಾ.ಉದಯ ಕುಡಚಿ, ರಾಜಶೇಖರ್ ಪಾಟೀಲ್, ತಾತ್ಯಾಸಾಹೇಬ ನಾಂದಣಿ, ಎಸ್.ಡಬ್ಲೂ.ಒ. ಎಚ್.ಎ.ಮಾಹುತ್, ಆರ್.ಎಫ್.ಒ ಪ್ರಸನ್ನ ಬೆಲ್ಲದ, ಎಡಿಎ ಆರ್.ಕೆ.ನಾಯ್ಕರ್, ಹಿಂದುಳಿದ ವರ್ಗಗಳ ಇಲಾಖಾಧಿಕಾರಿ ಮಹಾಂತೇಶ ಊರೊಳಗಿನ, ಕರೆಪ್ಪ ಗುಡೆನ್ನವರ, ಭೀಮಸೇನ್ ಬಾಗಿ ಇದ್ದರು. ಸಂಜು ಮುತಾಲಿಕ ಸ್ವಾಗತಿಸಿದರು. ಶಿವಾನಂದ ಗುಂಡಾಳಿ ನಿರೂಪಿಸಿದರು. ಮಹಾದೇವ ನಾಯಿಕ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.