ADVERTISEMENT

ಜೋಡೆತ್ತಿನ ಶರ್ಯತ್ತು: ₹51 ಲಕ್ಷ ಬಹುಮಾನ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2024, 13:41 IST
Last Updated 28 ಫೆಬ್ರುವರಿ 2024, 13:41 IST
<div class="paragraphs"><p>ಪ್ರಕಾಶ ಹುಕ್ಕೇರಿ</p><p></p></div>

ಪ್ರಕಾಶ ಹುಕ್ಕೇರಿ

   

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅಭಿಮಾನಿಗಳ ಬಳಗದಿಂದ ತಾಲ್ಲೂಕಿನ ಮಲಿಕವಾಡದಲ್ಲಿ ಮಾರ್ಚ್‌ 5ರಂದು ಜೋಡೆತ್ತಿನ ಚಕ್ಕಡಿ ಓಡಿಸುವ ಶರ್ಯತ್ತು ಆಯೋಜಿಸಲಾಗಿದೆ. ಎರಡು ವಿಭಾಗಗಳಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ₹51 ಲಕ್ಷ ಮೊತ್ತದ ವಿವಿಧ ಬಹುಮಾನ ಘೋಷಿಸಲಾಗಿದೆ.

ADVERTISEMENT

‘ಅ’ ವರ್ಗದ ಶರ್ಯತ್ತಿನಲ್ಲಿ ಕರ್ನಾಟಕವೂ ಸೇರಿ ಎಲ್ಲ ರಾಜ್ಯಗಳ ರೈತರು ಪಾಲ್ಗೊಳ್ಳಬಹುದು. ‘ಬ’ ವಿಭಾಗದಲ್ಲಿ ಕರ್ನಾಟಕದವರು ಮಾತ್ರ ಸ್ಪರ್ಧಿಸಬಹುದು.

‘ಅ’ ವಿಭಾಗದಲ್ಲಿ ಪ್ರಥಮ ಬಹುಮಾನ ₹17 ಲಕ್ಷ, ದ್ವಿತೀಯ ₹9 ಲಕ್ಷ, ತೃತೀಯ ₹5 ಲಕ್ಷ, ಚತುರ್ಥ ₹2 ಲಕ್ಷ ಹಾಗೂ ‘ಬ’ ವರ್ಗದಲ್ಲಿ ಪ್ರಥಮ ಬಹುಮಾನ ₹9 ಲಕ್ಷ, ದ್ವಿತೀಯ ₹5 ಲಕ್ಷ, ತೃತೀಯ ₹3 ಲಕ್ಷ, ಚತುರ್ಥ ₹1 ಲಕ್ಷ ಬಹುಮಾನ, ಶೀಲ್ಡ್ ಹಾಗೂ ನಿಶಾನಿ ನೀಡಲಾಗುತ್ತಿದೆ ಎಂದು ಶರ್ಯತ್ತು ಕಮಿಟಿ ಸದಸ್ಯರಾದ ಸುನೀಲ ಸಪ್ತಸಾಗರ, ಉಮೇಶ ಸಾತ್ವಾರ ತಿಳಿಸಿದ್ದಾರೆ.

ಈ ಶರ್ಯತ್ತು ವೀಕ್ಷಿಸಲು ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಅಂದಾಜು 5 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಜನರಿಗೆ ಊಟ ಹಾಗೂ ಕುಡಿಯುವ ನೀರಿಗಾಗಿ 10 ಕಡೆ ವ್ವವಸ್ಥೆ ಮಾಡಲಾಗಿದೆ.

ಬಡಿಗೆ– ಬಾರಕೋಲು ಹಿಡಿಯದೇ ಎತ್ತು–ಚಕ್ಕಡಿ ಓಡಿಸಬೇಕು. ಒಂಬತ್ತುವರೆ ಕಿ.ಮೀ ದೂರ ಓಡಿ ಹೋಗಿ ಬರಬೇಕು ಎಂಬುದು ನಿಯಮ. ನೋಂದಣಿಗಾಗಿ ಚಿಕ್ಕೋಡಿಯ ಲಿಬರಲ್‌ ಸಹಕಾರ ಸಂಸ್ಥೆ ಕಟ್ಟಡದಲ್ಲಿರುವ ಶರ್ಯತ್ತು ಕಮೀಟಿಯ ಕಚೇರಿ ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗೆ 9740877028, 8310383047 ಸಂಪರ್ಕಿಸುವಂತೆ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.