ಮೂಡಲಗಿ: ರಾಜ್ಯ ಸರ್ಕಾರವು ವಕ್ಫ್ ಹೆಸರಿನಲ್ಲಿ ರೈತರ ಜಮೀನು, ಮಠ, ಮಂದಿರಗಳ ಆಸ್ತಿ ಮತ್ತು ಸರ್ಕಾರದ ಆಸ್ತಿ ಕಬಳಿಸುತ್ತಿರುವುದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್‌ನ ಮೂಡಲಗಿ ತಾಲ್ಲೂಕು ಘಟಕದಿಂದ ಗುರುವಾರ ಸ್ಥಳೀಯ ಕಲ್ಮೇಶ್ವರ ವೃತ್ತದಲ್ಲಿ ರಸ್ತೆ ಸಂಚಾರ ತಡೆಹಿಡಿದು ಪ್ರತಿಭಟನೆ ನಡೆಸಿದರು.
ಬಲದೇವ ಸಣ್ಣಕ್ಕಿ, ಶಿವು ಗೋಟೂರ ಮಾತನಾಡಿ, ಪಹಣಿ ಕಾಲಂ 11ರಲ್ಲಿ ವಕ್ಫ್ ಆಸ್ತಿ ಎಂದು ಬರೆದಿರುವುದನ್ನು ಯಾವುದೇ ಶರತ್ತು ಬದ್ದ ದಾಖಲೆಗಳಿಲ್ಲದೆ ಮೊದಲಿನ ಪಹಣಿಯಂತೆ ತಿದ್ದುಪಡಿ ಮಾಡಬೇಕು ಮತ್ತು ವಕ್ಫ್ ಬೋರ್ಡ್ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ರೈತರ ಜಮೀನಗಳ ಮೇಲೆ, ಮಠ, ಮಂದಿರಗಳ, ಹಿಂದೂ ಸಮಾಜದ ರುದ್ರಭೂಮಿ ಮತ್ತು ಸರ್ಕಾರದ ಆಸ್ತಿ ಮೇಲಿನ ವಕ್ಫ್ ಹೆಸರನ್ನು ಸೇರಿಸಿರುವುದನ್ನು ಶೀಘ್ರ ರದ್ದುಪಡಿಸಬೇಕು. ಸರ್ಕಾರವು ಸ್ಪಂದಿಸದಿದ್ದರೆ ಬಜರಂಗ ದಳ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಶಿವಾನಂದ ಬಬಲಿ ಅವರಿಗೆ ಪ್ರತಿಭಟನಾಕಾರರು ಮನವಿ ನೀಡಿದರು.
ಪ್ರತಿಭಟನೆಯಲ್ಲಿ ಪುರುಷೋತ್ತಮ ಒಡೆಯರ, ದುಂಡಪ್ಪ ಶಿವಾಪುರ, ಲಕ್ಷ್ಮಣ ಮಿಶಾಳೆ, ಬಲದೇವ ಸಣ್ಣಕ್ಕಿ, ಲಕ್ಕಪ್ಪ ನಂದಿ, ಪ್ರಕಾಶ ಮಾದರ, ಶಿವಶಂಕರ ಖಾನಾಪುರೆ, ಮಾಲತಿ ಆಶ್ರೀತ, ದಯಾನಂದ ಸವದಿ, ಮಾಳಪ್ಪ ಮೆಳವಂಕಿ, ಶಿವಾನಂದ ಗೋಟೂರ, ಮಹಾಂತೇಶ ಮುಗಳಖೋಡ, ಮಾರುತಿ ಶಿಂದೆ, ದುಂಡಪ್ಪ ಹಳ್ಳೂರ, ರಾಮಚಂದ್ರ ಪಾಟೀಲ, ವಿನಾಯಿಕ ಬಡಿಗೇರ, ಅನಿಲ ಮಗದುಮ, ಸಚಿನ ತಳವಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.