ADVERTISEMENT

ಮಹಾವಿದ್ಯಾಲಯಕ್ಕೆ ಸೌಕರ್ಯ ಒದಗಿಸುವೆ: ಶಾಸಕ ಮಹೇಂದ್ರ ಭರವಸೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2024, 13:01 IST
Last Updated 24 ಜನವರಿ 2024, 13:01 IST
ನ್ಯಾಕ್ ಮಾನ್ಯತಾ ಪ್ರಕ್ರಿಯೆ ಕುರಿತು ನಡೆದ ಕಾರ್ಯಕ್ರಮದಲ್ಲಿ ಶಾಸಕ ಮಹೇಶ ತಮ್ಮಣ್ಣವರ ಮಾತನಾಡಿದರು.
ನ್ಯಾಕ್ ಮಾನ್ಯತಾ ಪ್ರಕ್ರಿಯೆ ಕುರಿತು ನಡೆದ ಕಾರ್ಯಕ್ರಮದಲ್ಲಿ ಶಾಸಕ ಮಹೇಶ ತಮ್ಮಣ್ಣವರ ಮಾತನಾಡಿದರು.   

ರಾಯಬಾಗ: ‘ಮಹಾವಿದ್ಯಾಲಯಕ್ಕೆ ಅವಶ್ಯವಿರುವ ಮೂಲ ಸೌಕರ್ಯಗಳನ್ನು ಮುಂದಿನ ಶೀಘ್ರವೇ ಒದಗಿಸುವೆ’ ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಭರವಸೆ ನೀಡಿದರು.

ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಆಯ್.ಕ್ಯೂ.ಎ.ಸಿ ವತಿಯಿಂದ ನಡೆದ ‘ಪರಿಷ್ಕೃತ ನ್ಯಾಕ್ ಮಾನ್ಯತಾ ಪ್ರಕ್ರಿಯೆ’ ಕುರಿತು ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರವನ್ನು ಬುಧವಾರ ಉದ್ಘಾಟಸಿ ಮಾತನಾಡಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಎಸ್‌.ಜಿ.ಎಲ್ ಹಾಗೂ ಗ್ರಂಥಪಾಲಕ ಲಕ್ಷ್ಮಿ ಎಸ್. ಕೆ ಪರಿಷ್ಕೃತ ನ್ಯಾಕ್ ಮಾನ್ಯತಾ ಪ್ರಕ್ರಿಯೆ ಕುರಿತು ಸಂಪೂರ್ಣ ಮಾಹಿತಿ ನೀಡಿದರು.

ADVERTISEMENT

ಪ್ರಾಚಾರ್ಯ ಎಲ್. ಬಿ ಬನಶಂಕರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಸಾಂಸ್ಕೃತಿಕ ವಿಭಾಗದ ಸಂಚಾಲಕ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಆರ್.ಬಿ.ಕೊಕಟನೂರ ಅತಿಥಿಗಳನ್ನು ಪರಿಚಯಿಸಿದರು. ಆಯ್.ಕ್ಯೂ.ಎ.ಸಿ. ಸಂಚಾಲಕ ಹಾಗೂ ವಾಣಿಜ್ಯಶಾಸ್ತ್ರದ ಅಧ್ಯಾಪಕ ಡಿ. ವೈ. ಕಾಂಬಳೆ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು.

ಎನ್.ಎಸ್.ಎಸ್ ಸಂಚಾಲಕ ಹಾಗೂ ವಾಣಿಜ್ಯಶಾಸ್ತ್ರದ ಮುಖ್ಯಸ್ಥ ಸುಭಾಷ ಕಚಕಾರಟ್ಟಿ, ಉಪನ್ಯಾಸಕರಾದ ಸಂಗಮೇಶ ದಡ್ಡಿಮನಿ, ಪ್ರವೀಣ ಅಂಗಡಿ, ಪದ್ಮಶ್ರೀ ಮನೆನ್ನವರ, ನಾಗಪ್ಪ ಗಂಗಣ್ಣವರ, ಆರ್.ಎ ಬಡಿಗೇರ, ಬಸವರಾಜ್ ಪಾಟೀಲ, ಎಸ್.ಜಿ. ಜಮಾದಾರ, ಪ್ರಮೋದ ಮುಂಜೆ, ಮಂಜುನಾಥ ಪಾಟೀಲ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.