ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಬೆಳಗಾವಿಯ ಲೀಲಾ ಬಬನ್ ಕಾಂಬ್ಳೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:30 IST
Last Updated 31 ಡಿಸೆಂಬರ್ 2020, 19:30 IST
ಲೀಲಾ ಬಬನ್ ಕಾಂಬ್ಳೆ
ಲೀಲಾ ಬಬನ್ ಕಾಂಬ್ಳೆ   

ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿದಂತೆಲ್ಲಾ ಆತಂಕವೂ ಜಾಸ್ತಿಯಾಗುತ್ತಿತ್ತು ನಿಜ. ಹಾಗೆಂದು ಕರ್ತವ್ಯ ಪ್ರಜ್ಞೆ ಮರೆಯಲಾದೀತೇ?! ಪ್ರಾಣ ಭಯದಿಂದಾಗಿ ಕೆಲಸದಿಂದ ಹಿಂದೆ ಸರಿದರೆ ನಗರದ ವಾತಾವರಣ ಮತ್ತಷ್ಟು ಹಾಳಾಗುವುದಿಲ್ಲವೇ? ಇದರಿಂದ ಜನರಿಗೆ ಮತ್ತಷ್ಟು ಆರೋಗ್ಯದ ತೊಂದರೆಗಳು ಕಾಣಿಸಿಕೊಳ್ಳುವುದಿಲ್ಲವೇ ಎಂದು ಭಾವಿಸಿ ಧೈರ್ಯವಾಗಿ ಬರುತ್ತಿದ್ದೆ.

2015ರಿಂದ ಪೌರಕಾರ್ಮಿಕಳಾಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇನೆ. ಲಾಕ್‌ಡೌನ್‌ ಸಂದರ್ಭದಲ್ಲಿ ಆತಂಕಪಡದೆ ಪಿಪಿಇ ಕಿಟ್ ಧರಿಸಿ, ಸ್ಯಾನಿಟೈಸರ್‌ ಮೊದಲಾದವುಗಳನ್ನು ಬಳಸಿಕೊಂಡು, ಮುಂಜಾಗ್ರತಾ ಕ್ರಮ ತೆಗೆದುಕೊಂಡು ದುಡಿದೆ. ಅದಕ್ಕೆ ಅಧಿಕಾರಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೊಂದು ಸಂಬಳ ತಂದುಕೊಂಡುವ ಕೆಲಸ ಎನ್ನುವುದಕ್ಕಿಂತ, ಕೊರೊನಾದ ಆ ಸಮಯದಲ್ಲಿ ಸೇವೆ ಎಂದೇ ಭಾವಿಸಿದೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದ ಸಂದರ್ಭದಲ್ಲಿ ಕೋವಿಡ್ ಕೇರ್ ಸೆಂಟರ್ ಬಳಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದೆ. ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೂ ಕಾರ್ಯ ನಿರ್ವಹಿಸುತ್ತಿದ್ದೆವು.ಪತಿಯೂ ಇದೇ ಕೆಲಸ ಮಾಡುತ್ತಿದ್ದಾರೆ. ಪಿಪಿಇ ಕಿಟ್ ಧರಿಸಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಲು ಕಿರಿಕಿರಿ ಆಗುತ್ತಿತ್ತು. ಬಳಿಕ ಸರಿ ಹೋಯಿತು.

ADVERTISEMENT

-ಲೀಲಾ ಬಬನ್ ಕಾಂಬ್ಳೆ, ಪೌರಕಾರ್ಮಿಕ ಮಹಿಳೆ, ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.