ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಬೆಳಗಾವಿಯ ದಾನಿ ವೆಂಕಟೇಶ ಕೆ. ಪಾಟೀಲ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:30 IST
Last Updated 31 ಡಿಸೆಂಬರ್ 2020, 19:30 IST
ದಾನಿ ವೆಂಕಟೇಶ ಪಾಟೀಲ
ದಾನಿ ವೆಂಕಟೇಶ ಪಾಟೀಲ   

ಕೋವಿಡ್‌ನಿಂದಾಗಿ ಎಲ್ಲೆಡೆ ತಲ್ಲಣಿಸುತ್ತಿದ್ದ ಸಂದರ್ಭವದು. ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗುತ್ತಲೇ ಇದ್ದವು. ಹೀಗಿರುವಾಗ, ಅವಶ್ಯಕತೆ ಉಳ್ಳವರಿಗೆ ನೆರವಾಗಲು ಕೆಲವು ಎನ್‌ಜಿಒಗಳು ಕೋವಿಡ್ ಕೇರ್ ಕೇಂದ್ರಗಳನ್ನು ತೆರೆದಿದ್ದವು. ಮನೆ ಗಳಲ್ಲೇ ಚಿಕಿತ್ಸೆ ಪಡೆಯುವವರೂ ಇದ್ದರು. ಅಂಥವರಿಗೆ ನಾನೂ ಸಹಾಯ ಮಾಡಬೇಕೆಂದು ಚಿಕಿತ್ಸೆಗೆ ಅತ್ಯವಶ್ಯ ವಾದ ಮೆಡಿಕಲ್ ಆಕ್ಸಿಜನ್ ಗ್ಯಾಸ್ ಉಚಿತವಾಗಿ ಪೂರೈಸಿದೆ.

ಕಾಕತಿ ಕೈಗಾರಿಕಾ ಪ್ರದೇಶ ದಲ್ಲಿ‘ಬೆಳಗಾಂ ಆಕ್ಸಿಜನ್ ಪ್ರೈವೇಟ್ ಲಿ.’ ಕಂಪನಿ ಹೊಂದಿದ್ದೇನೆ. ಇದರಲ್ಲಿ 40 ವರ್ಷಗಳ ಅನುಭವವಿದೆ. ಹಿಂದಿನಿಂದಲೂ ಸಮಾಜಕ್ಕೆ ಕೈಲಾದಷ್ಟು ಕೊಡುಗೆ ನೀಡುತ್ತಲೇ ಬಂದಿದ್ದೇನೆ. ಈವರೆಗೆ 4,500ಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ಉಚಿತವಾಗಿ ಕೊಟ್ಟಿದ್ದೇನೆ. ಇದರಿಂದ ಸಾವಿರಾರು ಮಂದಿಗೆ ನೆರವಾದ ತೃಪ್ತಿ ನನ್ನದು.ಇದಕ್ಕಾಗಿ ನನ್ನನ್ನು ಕೊರೊನಾ ಯೋಧ ಎಂದು ಗುರುತಿಸಿರುವುದು ಹೆಮ್ಮೆ ತರಿಸಿದೆ.

ಆರ್‌ಎಸ್‌ಎಸ್‌ನಿಂದ ತೆರೆದಿದ್ದ ಜನಸೇವಾ ಕೋವಿಡ್ ಕೇರ್ ಕೇಂದ್ರ, ಅಂಜುಮನ್ ಎ ಇಸ್ಲಾಂ ಸಮಿತಿ, ಆಲ್‌ ಇಕ್ರಾ ಸಂಸ್ಥೆ ಹಾಗೂ ಬೆಳಗಾವಿ ಫೇಸ್‌ಬುಕ್‌ ಫ್ರೆಂಡ್ಸ್‌ ಯೂನಿಯನ್‌ ಮೊದಲಾದ ಸರ್ಕಾರೇತರ ಸಂಘ ಸಂಸ್ಥೆಗಳಿಗೆ (ಎನ್‌ಜಿಒ) ಆಗಸ್ಟ್‌ನಿಂದ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಕೊಡುತ್ತಿದ್ದೇನೆ. ಅವರು ಒದಗಿಸುವ ಸಿಲಿಂಡರ್‌ಗಳಿಗೆ ಮೆಡಿಕಲ್‌ ಆಕ್ಸಿಜನ್ ಗ್ಯಾಸ್ ಭರ್ತಿ ಮಾಡಿಕೊಡಲು ನಮ್ಮ ಸಿಬ್ಬಂದಿಯನ್ನೇ ನಿಯೋಜಿಸಿದ್ದೆ. ಈಗಲೂ ಅಗತ್ಯ ಇರುವವರಿಗೆ ಆಕ್ಸಿಜನ್ ಪೂರೈಸುತ್ತಿದ್ದೇನೆ.

ADVERTISEMENT

-ವೆಂಕಟೇಶ ಕೆ. ಪಾಟೀಲ, ಉದ್ಯಮಿ, ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.