ADVERTISEMENT

ಬೆಳಗಾವಿ: ತರಾತುರಿಯಲ್ಲಿ ಅಹವಾಲು ಆಲಿಸಿದ ಮುಖ್ಯಮಂತ್ರಿ, ಸ್ಥಳೀಯರಲ್ಲಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 10:29 IST
Last Updated 4 ಅಕ್ಟೋಬರ್ 2019, 10:29 IST
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ   

ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ಇಲ್ಲಿನ ಸರ್ಕಾರಿ ಅತಿಥಿಗೃಹದ ಆವರಣದಲ್ಲಿ ಸಾರ್ವಜನಿಕರಿಂದ ತರಾತುರಿಯಲ್ಲಿ ಅಹವಾಲು ಆಲಿಸಿದ್ದು ಆಕ್ರೋಶಕ್ಕೆ ಕಾರಣವಾಯಿತು.

ಸಾರ್ವಜನಿಕರು ಒಬ್ಬೊಬ್ಬರಾಗಿ ಬಂದು ಮನವಿ ಸಲ್ಲಿಸಲು ಜಿಲ್ಲಾಡಳಿತದಿಂದ ವೇದಿಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ನಿಗದಿತ ಸಮಯಕ್ಕಿಂತಲೂ ತಾಸು ತಡವಾಗಿ ಅತಿಥಿಗೃಹದಿಂದ ಹೊರಬಂದ ಮುಖ್ಯಮಂತ್ರಿ, ‘ಬ್ಯಾರಿಕೇಡ್‌ ಕೋಟೆ’ಯಲ್ಲಿ ನಿಂತಿದ್ದ ಜನರ ಬಳಿಗೆ ತಾವೇ ಹೋಗಿ ಮನವಿಗಳನ್ನು ಸ್ವೀಕರಿಸಿ ತೆರಳಿದರು. ಕೆಲವೇ ನಿಮಿಷಗಳಲ್ಲೇ ಈ ಕಾರ್ಯಕ್ರಮ ಮುಗಿಯಿತು.

‘ಪೊಲೀಸರು ನಾವು ಒಳಗೆ ಬರಲು ಅಡ್ಡಿಪಡಿಸಿದರು. ಅಂಗವಿಕಲ ಬರುವುದಕ್ಕೂ ಅವಕಾಶ ಕೊಡಲಿಲ್ಲ. ಹೀಗಾಗಿ ತಡವಾಯಿತು. ಕಾರ್ಯಕ್ರಮದ ಸಮಯವನ್ನು ದಿಢೀರ್‌ ಬದಲಾವಣೆ ಮಾಡಿದ ಮಾಹಿತಿಯೂ ಇರಲಿಲ್ಲ. ನೇಕಾರರು, ರೈತರು, ಮನೆ ಕಳದುಕೊಂಡರ ಸಮಸ್ಯೆ ಹೇಳಿಕೊಳ್ಳಲು ಮತ್ತು ಪರಿಹಾರ ಕೇಳಲು ಇಲ್ಲಿಗೆ ಬಂದಿದ್ದೆವು. ಆದರೆ, ಅವಕಾಶವಾಗಲಿಲ್ಲ’ ಎಂದು ವಡಗಾವಿಯ ಸರ್ವೋದಯ ಸಂಘಟನೆ ಅಧ್ಯಕ್ಷ ಶ್ರೀನಿವಾಸ ತಾಳೂಕರ, ಕಿತ್ತೂರಿನ ರಾಷ್ಟ್ರೀಯ ಮಹಿಳಾ ಒಕ್ಕೂಟದವರು ಆರೋಪಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.