ರಾಯಬಾಗ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ರಾಮಕೃಷ್ಣ ಪಬ್ಲಿಕ್ ಸ್ಕೂಲ್ ಬೆಕ್ಕೇರಿ ಇವರ ಸಹಯೋಗದಲ್ಲಿ ಪಶು ಚಿಕಿತ್ಸಾಲಯ ಮೊರಬ ಇವರ ವ್ಯಾಪ್ತಿಯಲ್ಲಿ ಬರುವ ಬೆಕ್ಕೇರಿಯಲ್ಲಿ 185 ಸಾಕು ನಾಯಿಗಳಿಗೆ ಲಸಿಕೆಯನ್ನು ಹಾಕಿ ಲಸಿಕಾ ಅಭಿಯಾನ ಯಶಸ್ವಿಗೊಳಿಸಲಾಯಿತು.
ಬಳಿಕ ಮುಖ್ಯ ಪಶುವೈದ್ಯಾಧಿಕಾರಿಗಳು ಡಾ.ಎಂ.ಬಿ. ಪಾಟೀಲ ಮಾತನಾಡಿ, ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಸುಲಭವಾಗಿ ಹರಡುವ ಸೋಂಕುಗಳನ್ನು ಝೂನೋಟಿಕ್ ಕಾಯಿಲೆಗಳು ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ರೇಬೀಸ್ (ನಾಯಿಗಳಿಂದ), ಆಂಥ್ರಾಕ್ಸ್ (ಕುರಿ ಮತ್ತು ಮೇಕೆಗಳಿಂದ) ಮತ್ತು ಹಕ್ಕಿ ಜ್ವರ (ಕೋಳಿಗಳಿಂದ) ಸೇರಿವೆ. ಹೀಗಾಗಿ ತಮ್ಮ ಸಾಕು ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿಸಿ ಎಂದು ಹೇಳಿದರು.
ರಾಮಕೃಷ್ಣ ಪಬ್ಲಿಕ್ ಸ್ಕೂಲ್ ಸಂಸ್ಥೆಯ ಅಧ್ಯಕ್ಷರಾದ ಎಲ್.ಆರ್. ಕಟ್ಟಿಕಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾದೇವ ಕಾನಡೆ, ಪ್ರಶಾಂತ ಮಾಶಾಲಜಿ, ಕೃಷ್ಣಪ್ಪ ಕಟ್ಟಿಕಾರ, ಹಿ.ಪ.ವೈ.ಪರಿಕ್ಷಕರು ಜಿತೇಂದ್ರ ಕಾಂಬಳೆ, ಸಂತೋಷ ಮನ್ನಿಕೇರಿ, ವಿಲಾಸ್ ಹೂಗಾರ, ಮಲ್ಲಪ್ಪ ಹಿರೇಕೋಡಿ, ಕಿರಣ ಭೋರಗಾವೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.