ADVERTISEMENT

ರಾಯಬಾಗ: ಹಳ್ಳಿಯ ಶಾಲೆಗೆ ‘ಹೈಟೆಕ್’ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 4:33 IST
Last Updated 11 ಜುಲೈ 2024, 4:33 IST
<div class="paragraphs"><p>ರಾಯಬಾಗ ಹೊರವಲಯದ ಹಳ್ಳದಹರಿ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣ</p></div>

ರಾಯಬಾಗ ಹೊರವಲಯದ ಹಳ್ಳದಹರಿ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣ

   

- ಪ್ರಜಾವಾಣಿ

ರಾಯಬಾಗ (ಬೆಳಗಾವಿ ಜಿಲ್ಲೆ): ರಾಯಬಾಗ ಗ್ರಾಮೀಣ ವ್ಯಾಪ್ತಿಯ ಹಳ್ಳದಹರಿ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ  ಶಾಲೆಗೆ ಆಧುನಿಕ ಸ್ಪರ್ಶ ನೀಡಿ, ಅಂದಗೊಳಿಸಲಾಗಿದೆ. 1958ರಲ್ಲಿ ಅಸ್ತಿತ್ವಕ್ಕೆ ಬಂದ ಶಾಲೆಗೆ ಈಗ ಜೀವಕಳೆ ಮೂಡಿದೆ.

ADVERTISEMENT

40 ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಕ್ಕೆ ಪೂರಕವಾಗಿ ಶಾಲೆಯ ಅಭಿವೃದ್ಧಿಯಲ್ಲಿ ಮುಖ್ಯಶಿಕ್ಷಕ ಮಹಾಂತೇಶ ಬೋರಗಾವಿ ಮತ್ತು ಶಿಕ್ಷಕ ಹನುಮಂತ ಆಯಟ್ಟಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರನ್ನು ಸಂಪರ್ಕಿಸಿ, ಹಣ ಸಂಗ್ರಹಿಸಿ ಶಾಲೆಗೆ ಅಗತ್ಯ ಸೌಲಭ್ಯ ಕಲ್ಪಿಸಿದ್ದಾರೆ.

ಕೈತೋಟ, ಕಾಂಪೌಂಡ್, ಗೇಟ್‌, ನೀರಿನ ಟ್ಯಾಂಕ್‌, ಶೌಚಾಲಯ, ವಿದ್ಯುತ್‌ ಸೌಲಭ್ಯ, ಆವರಣ ಹಾಗೂ ರಸ್ತೆ ಪೇವರ್ಸ್‌ ಅಳವಡಿಸಿದ್ದಾರೆ. ಕಲ್ಲಿನ ಗೋಡೆಗಳಿಗೆ ನುಣುಪು ನೀಡಿ ಚಿತ್ತಾಕರ್ಷಕ ಮಾಡಿದ್ದಾರೆ. ಡಿಜಿಟಲ್‌ ಬ್ಯಾನರ್‌, ಫ್ಲೆಕ್ಸ್‌, ಪ್ರೊಜೆಕ್ಟರ್‌ ಸೇರಿದಂತೆ ಎಲ್ಲ ಕಲಿಕಾ ಸಾಮಗ್ರಿಗಳನ್ನೂ ತರಿಸಿಕೊಂಡಿದ್ದಾರೆ.

ಇಲ್ಲಿನ ಕಾರ್ಮಿಕರ ಮಕ್ಕಳು ಇಂಗ್ಲಿಷ್‌ ಪಾಠಗಳನ್ನು ಅಚ್ಚುಕಟ್ಟಾಗಿ ಓದುತ್ತಾರೆ. ಕ್ರೀಡೆ, ವಿಜ್ಞಾನ, ಪ್ರಚಲಿತ ವಿದ್ಯಮಾನಗಳ ಜೊತೆಗೆ ದೇಶ– ವಿದೇಶಗಳ ಬಗ್ಗೆ ಸಾಮಾನ್ಯ ಜ್ಞಾನ ಬೆಳೆಸಿಕೊಂಡಿದ್ದಾರೆ. ಮಕ್ಕಳ ‘ಸಂವಿಧಾನ ಪೀಠ’ ರಚಿಸಿರುವುದು ವಿಶೇಷ. ಈ ಮೂಲಕ ಸಂವಿಧಾನದ ಆಶಯಗಳ ತಿಳಿವಳಿಕೆ ಮೂಡಿಸಲಾಗುತ್ತಿದೆ.

ಸಹಭಾಗಿತ್ವದ ಮಂತ್ರ: ಶಿಕ್ಷಕರ ಇಚ್ಛಾಶಕ್ತಿ, ಸಮುದಾಯದ ಸಹಭಾಗಿತ್ವ ಇದ್ದರೆ ಸರ್ಕಾರಿ ಶಾಲೆಯನ್ನು ಹೇಗೆ ಅಭಿವೃದ್ಧಿ ಪಡಿಸಬಹುದು ಎಂಬುದಕ್ಕೆ ನಮ್ಮ ಗ್ರಾಮದ ಶಾಲೆಯೇ ಉದಾಹರಣೆ.  ಜಾತ್ರೆಗೆ ಪಟ್ಟಿ ಹಾಕುವ ಬದಲು ಶಾಲೆ ಸುಧಾರಣೆಗೆ ಹಣ ಸಂಗ್ರಹಿಸಲಾಗಿದೆ. ಈ ಶಾಲೆಯಲ್ಲಿ ಓದುವವರು ಕೃಷಿ, ಕೂಲಿ ಕಾರ್ಮಿಕರ ಮಕ್ಕಳು. ಶಾಲೆಯಿಂದ ವಿಮುಖರಾಗಿದ್ದ ಮಕ್ಕಳನ್ನು ನಲಿ-ಕಲಿ ಮೂಲಕ ಮತ್ತೆ ಕರೆತರಲಾಗಿದೆ’ ಎಂದು ಗ್ರಾಮಸ್ಥರು ತಿಳಿಸಿದರು.

ರಾಯಬಾಗ ಹೊರವಲಯದ ಹಳ್ಳದಹರಿ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣ
ರಾಯಬಾಗ ಹೊರವಲಯದ ಹಳ್ಳದಹರಿ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರವೇಶದ್ವಾರ
ಈ ಶಾಲೆಯಲ್ಲಿ ಕಲಿಯಲು ಹೆಮ್ಮೆ ಇದೆ. ಶಾಲೆಗೆ ಸಿಮೆಂಟ್‌ ಚಾವಣಿ ಬೇಕಿದೆ. ಶಿಕ್ಷಣಾಧಿಕಾರಿಗಳು ಸಚಿವರು ಇದರತ್ತ ಗಮನ ಹರಿಸಬೇಕು
ಸ್ವಾತಿ ನೇಮಿನಾಥ ಚೌಗುಲಾ ವಿದ್ಯಾರ್ಥಿನಿ
ಗ್ರಾಮ ಪಂಚಾಯಿತಿ ಸದಸ್ಯರು ಪಾಲಕರ ನೆರವಿನಿಂದ ಶಾಲೆ ಹೈಟೆಕ್ ಆಗಿದೆ. ಇನ್ನೂ ನೆರವು ಸಿಕ್ಕರೆ ಕಂಪ್ಯೂಟರ್‌ ಶಿಕ್ಷಣ ನೀಡುತ್ತೇವೆ.
ಹನುಮಂತ ಆಯಟ್ಟಿ ‌‌ ಶಿಕ್ಷಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಳ್ಳದ ಹರಿ ತೋಟ
- ಶಾಲೆಗೆ ಬಂದರೆ ಮತ್ತೆ ಮನೆಗೆ ಹೋಗಲು ಆಗುವುದಿಲ್ಲ. ಸುತ್ತಲಿನ ಹಸಿರು ಪರಿಸರದಲ್ಲಿ ಆಟವಾಡುವುದೇ ಸಂಭ್ರಮ.
ಬಸವರಾಜ ಸತ್ಯಪ್ಪ ಬಂತೆ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.