ADVERTISEMENT

ಮಳೆ: ರಸ್ತೆ ಜಲಾವೃತ; ಸ್ಥಳೀಯರ ಗೋಳಾಟ

​ಪ್ರಜಾವಾಣಿ ವಾರ್ತೆ
Published 25 ಮೇ 2024, 14:08 IST
Last Updated 25 ಮೇ 2024, 14:08 IST
ಚನ್ನಮ್ಮನ ಕಿತ್ತೂರು ಪಟ್ಟಣದ ಸೋಮವಾರ ಪೇಟೆಯ ಬಸವೇಶ್ವರ ಕಾಲೊನಿ ಬಳಿಯ ಮುಖ್ಯರಸ್ತೆಯಲ್ಲಿ ಮಳೆನೀರು ನಿಂತುಕೊಂಡಿರುವುದು
ಚನ್ನಮ್ಮನ ಕಿತ್ತೂರು ಪಟ್ಟಣದ ಸೋಮವಾರ ಪೇಟೆಯ ಬಸವೇಶ್ವರ ಕಾಲೊನಿ ಬಳಿಯ ಮುಖ್ಯರಸ್ತೆಯಲ್ಲಿ ಮಳೆನೀರು ನಿಂತುಕೊಂಡಿರುವುದು   

ಚನ್ನಮ್ಮನ ಕಿತ್ತೂರು: ‘ಅಲ್ಪ ಪ್ರಮಾಣದಲ್ಲಿ ಮಳೆಯಾದರೂ ಇಲ್ಲಿಯ ಸೋಮವಾರ ಪೇಟೆಯ ಕೊನೆಯಂಚಿನ ಮುಖ್ಯರಸ್ತೆ, ಬಸವೇಶ್ವರ ಕಾಲೊನಿಹಾಗೂ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತ ಆಗುತ್ತವೆ. ಈ ಸಮಸ್ಯೆಗೆ ಯಾವಾಗ ಮುಕ್ತಿ ಸಿಗುತ್ತದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ಲೋಕೋಪಯೋಗಿ ಇಲಾಖೆ ಕಚೇರಿಗೆ ಭೇಟಿ ನೀಡಿದ ಅವರು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರ ಎದುರು ಅಳಲು ತೋಡಿಕೊಂಡರು.

‘ಮಳೆಯಾದರೆ ಮೇಲಿಂದ ನೀರು ನುಗ್ಗಿ ಬರುತ್ತದೆ. ಹರಿದು ಹೋಗಲು ಆಸ್ಪದ ಇಲ್ಲದ್ದರಿಂದ ರಸ್ತೆ ಹಳ್ಳದಂತಾಗುತ್ತದೆ.ಇದರಿಂದ ಮನೆಯೊಳಗೆ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಸುತ್ತದೆ. ಶೀಘ್ರದಲ್ಲೇ ಈ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಕಿತ್ತೂರು-ತಡಕೋಡ ರಸ್ತೆ ಸ್ಥಗಿತಗೊಳಿಸಿ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಲೋಕೋಪಯೋಗಿ ಎಇಇ ಸಂಜೀವ ಮಿರಜಕರ ಮಾತನಾಡಿ, ‘ರಸ್ತೆಯಿಂದ ಮುಂದೆ ನೀರು ಹರಿಯಲು ಅವಕಾಶ ಇಲ್ಲ. ಅಕ್ಕಪಕ್ಕ  ಖಾಸಗಿ ವ್ಯಕ್ತಿಗಳ ಜಮೀನುಗಳಿವೆ. ಅವರು ಭೂಮಿ ನೀಡಿದರೆ ಮಳೆಯ ನೀರನ್ನು ಮುಂದೆ ಹರಿದು ಹೋಗುವಂತೆ ಕಾಮಗಾರಿ ಕೈಗೊಳ್ಳಲಾಗುವುದು’ ಎಂದರು.

ಎಸ್.ಬಿ.ವಾಳದ, ಚಂದ್ರಕಾಂತ ಆರೇರ, ಮಡಿವಾಳಪ್ಪ ಸರಪಳಿ, ಗಿರಿಮಲ್ಲಪ್ಪ ಹೊಸೆಟ್ಟಿ, ಶ್ರೀಕಾಂತ ಅವಲಕ್ಕಿ, ಗೋಪಾಲ ಪತಂಗೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.