ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು
ಚಿಕ್ಕೋಡಿಯಲ್ಲಿ ಪ್ರಯಾಣಿಕರಿಗೆ ತಂಗುದಾಣಗಳಿಲ್ಲ. ಇರುವ ಕೆಲವು ಕಡೆಗಳಲ್ಲಿ ನಿಗದಿತ ಸ್ಥಳದಲ್ಲಿ ಬಸ್ ನಿಲ್ಲಿಸುವುದಿಲ್ಲ. ಇದರಿಂದಾಗಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಅಂಕಲಿ ಕೂಟ್, ಮಿನಿ ವಿಧಾನಸೌಧದ ಬಳಿ ಬಹಳ ತೊಂದರೆ ಇದೆ. ಪ್ರಯಾಣಿಕರು ಬಸ್‌ಗಾಗಿ ರಸ್ತೆಯಲ್ಲೇ ನಿಲ್ಲುವುದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕು. ಜನರಿಗೆ ಆಗುತ್ತಿರುವ ಅನಾನುಕೂಲ ತಪ್ಪಿಸಬೇಕು.
– ರಾಜ್ ಜೆ. ಜಾಧವ, ಸಂಸ್ಥಾಪಕ, ಸಹರಾ ಇಂಟರ್‌ನ್ಯಾಷನನ್ ಬಚಪನ್ ಪ್ಲೇ ಸ್ಕೂಲ್, ಚಿಕ್ಕೋಡಿ
ಇನ್ನಾದರೂ ಎಚ್ಚೆತ್ತುಕೊಳ್ಳಲಿ
ಉಪವಿಭಾಗದ ಕೇಂದ್ರ ಸ್ಥಾನವಾದ ಚಿಕ್ಕೋಡಿಯಲ್ಲಿ ಸೂಕ್ತ ತಂಗುದಾಣಗಳಿಲ್ಲದೇ ಪ್ರಯಾಣಿಕರರು ಪರದಾಡುವಂತಾಗಿದೆ. ಅವರು ಗಂಟೆಗಟ್ಟಲೆ ಬಿಸಿಲಿನಲ್ಲಿಯೇ ನಿಲ್ಲಬೇಕಾದ ಸ್ಥಿತಿ ಇದೆ. ಈ ಕುರಿತು ‘ಪ್ರಜಾವಾಣಿ’ ಬೆಳಕು ಚೆಲ್ಲಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಜನರಿಗೆ ಅನುಕೂಲ ಮಾಡಿಕೊಡಬೇಕು.
– ಮಲಿಕ್ ಜಮಾದಾರ, ಆರ್‌ಸಿಯು ವಿದ್ಯಾರ್ಥಿ
ಜನಪ್ರತಿನಿಧಿಗಳು ಗಮನಹರಿಸಬೇಕು
ಚಿಕ್ಕೋಡಿ ತಾಲ್ಲೂಕು ಕೇಂದ್ರವಾಗಿದ್ದರೂ ಅಭಿವೃದ್ಧಿಯಲ್ಲಿ ಹಿಂದುಳಿದ ಪ್ರದೇಶವಾಗಿದೆ. ಈ ಪಟ್ಟಣದ ಅಲ್ಲಲ್ಲಿ ಪ್ರಯಾಣಿಕರ ತಂಗುದಾಣಗಳಿಲ್ಲದಿರುವುದು ಕಳವಳಕಾರಿಯಾಗಿದೆ. ಸಾರ್ವಜನಿಕರು ನಿತ್ಯವೂ ಪರದಾಡಬೇಕಾಗಿದೆ. ಅದರಲ್ಲೂ ಮಹಿಳಯರು, ವೃದ್ಧರ ಪರದಾಟ ಹೇಳತೀರದು. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎನ್ನಬಹುದು. ಇನ್ನಾದರೂ, ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕು. ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸಬೇಕು.
– ಸದಾಶಿವ ಮುರಗೋಡ, ರಾಮದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.