ADVERTISEMENT

ರೇಣುಕಾಚಾರ್ಯರು ಸರ್ವ ಧರ್ಮೀಯರಿಗೂ ಗುರು- ಶಾಸಕ ಅನಿಲ ಬೆನಕೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 13:30 IST
Last Updated 13 ಮಾರ್ಚ್ 2022, 13:30 IST
ಬೆಳಗಾವಿಯ ಹುಕ್ಕೇರಿ ಹಿರೇಮಠ ಶಾಖೆಯಲ್ಲಿ ನಡೆದ ರೇಣುಕ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಅನಿಲ ಬೆನಕೆ ಅವರನ್ನು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿದರು
ಬೆಳಗಾವಿಯ ಹುಕ್ಕೇರಿ ಹಿರೇಮಠ ಶಾಖೆಯಲ್ಲಿ ನಡೆದ ರೇಣುಕ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಅನಿಲ ಬೆನಕೆ ಅವರನ್ನು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿದರು   

ಬೆಳಗಾವಿ: ‘ಹುಕ್ಕೇರಿ ಹಿರೇಮಠ ಅದ್ಭುತ ಕ್ರಾಂತಿ ಮಾಡುತ್ತಾ ಬಂದಿದೆ. ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನವನ್ನು ಆರಂಭಿಸಿದ್ದು ನಮ್ಮ ಈ ಮಠವೇ ಎನ್ನುವುದು ಹೆಮ್ಮೆಯ ಸಂಗತಿ. ಈಗ ಶ್ರಿಗಳು ರೇಣುಕಾಚಾರ್ಯ ಜಯಂತಿಯನ್ನು ಗಣೇಶ ಉತ್ಸವ ಮಾದರಿಯಲ್ಲಿ ನಡೆಸಲು ಪಣ ತೊಟ್ಟಿರುವುದು ಸಂತಸ ತಂದಿದೆ’ ಎಂದು ಶಾಸಕ ಅನಿಲ ಬೆನಕೆ ಹೇಳಿದರು.

ಇಲ್ಲಿನ ಲಕ್ಷ್ಮಿ ಟೇಕ್‌ನಲ್ಲಿರುವ ಹುಕ್ಕೇರಿ ಹಿರೇಮಠ ಶಾಖೆಯಲ್ಲಿ ರೇಣುಕಾಚಾರ್ಯ ಜಯಂತಿ ನಿಮಿತ್ತ ಭಾನುವಾರ ಆರಂಭವಾದ ಐದು ದಿನಗಳ ರೇಣುಕ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ರೇಣುಕಾಚಾರ್ಯರು ಸರ್ವ ಧರ್ಮೀಯರಿಗೂ ಗುರುಗಳಾಗಿದ್ದಾರೆ. ಅವರ ಉತ್ಸವವನ್ನು ಎಲ್ಲರೂ ಕೂಡಿ ಆಚರಿಸಬೇಕು’ ಎಂದರು.

ADVERTISEMENT

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ‘ರೇಣುಕಾಚಾರ್ಯರ ತತ್ವಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಬೇಕು ಎಂದರೆ ಅವರ ಉತ್ಸವವನ್ನು ಸಾರ್ವತ್ರಿಕಗೊಳಿಸಬೇಕು ಎನ್ನುವ ಸದುದ್ದೇಶದಿಂದ ಶ್ರೀಮಠ ಸಂಕಲ್ಪ ಮಾಡಿದೆ. ರಂಭಾಪುರಿ ಶ್ರೀಗಳ ಆಜ್ಞೆಯಂತೆ ನಾವೆಲ್ಲರೂ ಜಯಂತಿಯನ್ನು ಅದ್ದೂರಿಯಾಗಿ ಎಲ್ಲಾ ಕಡೆಯೂ ನಡೆಸೋಣ’ ಎಂದರು.

ಮಹಾನಗರ ಪಾಲಿಕೆ ಸದಸ್ಯರನ್ನು ಶ್ರೀಗಳು ಸನ್ಮಾನಿಸಿದರು.

ನಗರಪಾಲಿಕೆ ಸದಸ್ಯರಾದ ವೀಣಾ ವಿಜಾಪುರೆ, ರಿಯಾಜ್ ಕಿಲ್ಲೇದಾರ ಮಾತನಾಡಿದರು.

ಅರವಿಂದ್ ಜೋಶಿ, ಚಂದ್ರಶೇಖರ ಶಾಸ್ತ್ರಿ ಇದ್ದರು.

ರಾಜು ಪಟಗುಂದಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.