ADVERTISEMENT

ಮೂಡಲಗಿ | 'ಬರಪೀಡಿತ ಪ್ರದೇಶ ಘೋಷಣೆಗೆ ಮನವಿ'

​ಪ್ರಜಾವಾಣಿ ವಾರ್ತೆ
Published 15 ಮೇ 2024, 14:17 IST
Last Updated 15 ಮೇ 2024, 14:17 IST
ಮೂಡಲಗಿ ತಾಲ್ಲೂಕಿನ ಹೊಸಯರಗುದ್ರಿ ಗ್ರಾಮದ ರೈತರು ಹೊಸಯರಗುದ್ರಿ ಗ್ರಾಮವನ್ನು ಬರಪಿಡಿತ ಪ್ರದೇಶ ಎಂದು ಘೋಷಿಸಬೇಕು ಎಂದು  ಆಗ್ರಹಿಸಿ ಮೂಡಲಗಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು
ಮೂಡಲಗಿ ತಾಲ್ಲೂಕಿನ ಹೊಸಯರಗುದ್ರಿ ಗ್ರಾಮದ ರೈತರು ಹೊಸಯರಗುದ್ರಿ ಗ್ರಾಮವನ್ನು ಬರಪಿಡಿತ ಪ್ರದೇಶ ಎಂದು ಘೋಷಿಸಬೇಕು ಎಂದು  ಆಗ್ರಹಿಸಿ ಮೂಡಲಗಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು   

ಮೂಡಲಗಿ: ಮೂಡಲಗಿ ತಾಲ್ಲೂಕಿನ ಹೊಸಯರಗುದ್ರಿ ಗ್ರಾಮವನ್ನು ‘ಬರಪೀಡಿತ ಪ್ರದೇಶ’ ಎಂದು ಸರ್ಕಾರವು ಘೋಷಿಸಬೇಕು ಎಂದು ರೈತರು ಮಂಗಳವಾರ ತಹಶೀಲ್ದಾರ್‌ಗೆ  ಮನವಿ ಸಲ್ಲಿಸಿದರು.

ರಾಜ್ಯದ ಹಲವು ತಾಲ್ಲೂಕುಗಳ ಗ್ರಾಮಗಳ ರೈತರಿಗೆ ಬರಪೀಡಿತ ಪ್ರದೇಶವೆಂದು ಘೋಷಿಸಿ ಬರಪರಿಹಾರವನ್ನು ರೈತರ ಖಾತೆಗಳಿಗೆ ಜಮಾ ಮಾಡಿದೆ. ಆದರೆ ಮೂಡಲಗಿ ತಾಲ್ಲೂಕಿನಲ್ಲಿ ಬರಗಾಲ ಇದ್ದರೂ ಕೇವಲ 13 ಗ್ರಾಮಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದೆ. ಹೊಸಯರಗುದ್ರಿ ಬರಗಾಲ ತಾಂಡವಾಡುತ್ತಿದ್ದರೂ ಬರಪಿಡಿತ ಎಂದು ಗುರುತಿಸಿಲ್ಲ. ಬರಪೀಡಿತ ಬಗ್ಗೆ ಸಮೀಕ್ಷೆ ಮಾಡಿ ಖಚಿತ ಪಡಿಸಿಕೊಂಡು ಹೊಸಯರಗುದ್ರಿ ಗ್ರಾಮವನ್ನು ಬರಪೀಡಿತ ಗ್ರಾಮವೆಂದು ಘೋಷಿಸಬೇಕು. ಬರಗಾಲದಿಂದ ನಷ್ಟವಾದ ಬೆಳೆಗಳಿಗೆ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವೆಂಕಪ್ಪ ನಾಯಿಕ, ನಿಂಗಪ್ಪ ಮಜ್ಜಗಿ, ಸುರೇಶ ನಾಯಕ, ಶಿವನಗೌಡ ಪಾಟೀಲ, ಬಸಪ್ಪ ಪಾಟೀಲ, ಅಡಿವೆಪ್ಪ ಮಿರ್ಜಿ, ತಿಮ್ಮನ ಮಜ್ಜಗಿ, ಪ್ರಮೋದ ಚನ್ನಾಳ, ಸುರೇಶ ಗೂಮ್ಮಡಿ, ಸಚಿನ ಮಾಳೇದ, ಸತ್ತೆಪ್ಪ ಹೂಗಾರ ಸೇರಿದಂತೆ ಅನೇಕರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.