ADVERTISEMENT

ರೋಬೊಟಿಕ್‌ ಪ್ರಯೋಗಾಲಯಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2023, 14:42 IST
Last Updated 3 ನವೆಂಬರ್ 2023, 14:42 IST
03-ಸವದತ್ತಿ-01: ಉದ್ಯೋಗ ವಾಹಿನಿ ಜಾಗೃತಿ ರಥಕ್ಕೆ ತಾಪಂ ಇಓ ಯಶವಂತಕುಮಾರ ಚಾಲನೆ ನೀಡಿದರು.
03-ಸವದತ್ತಿ-01: ಉದ್ಯೋಗ ವಾಹಿನಿ ಜಾಗೃತಿ ರಥಕ್ಕೆ ತಾಪಂ ಇಓ ಯಶವಂತಕುಮಾರ ಚಾಲನೆ ನೀಡಿದರು.   

ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಪಿಜೆಎನ್‌ ಪ್ರೌಢಶಾಲೆಗೆ ಸನ್‌ 2022–23ನೇ ಸಾಲಿನ ರಾಜ್ಯಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಮಿಸಿದ ಸ್ಟೆಮ್‌ ರೊಬೊಟಿಕ್ಸ್ ಎಂಜಿನಿಯರಿಂಗ್‌ ಪ್ರಯೋಗಾಲಯಕ್ಕೆ ಸಂಸದ ಈರಣ್ಣ ಕಡಾಡಿ ಅವರು ನ. 4ರಂದು ಬೆಳಿಗ್ಗೆ 10ಕ್ಕೆ ಚಾಲನೆ ನೀಡಲಿದ್ದಾರೆ.

ಗೋಕಾಕ ಎನ್‌ಇಎಸ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಆರ್.ಪಂಚಗಾವಿ, ಉಪಾಧ್ಯಕ್ಷ ಬಿ.ಎಸ್.ಗೋರೋಶಿ, ಕಾರ್ಯದರ್ಶಿ ಪ್ರಕಾಶ ಕುರಬೇಟ ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Cut-off box - ಉದ್ಯೋಗ ವಾಹಿನಿ ಜಾಗೃತಿ ರಥಕ್ಕೆ ಚಾಲನೆ  ಸವದತ್ತಿ: ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿಯ ಆವರಣದಲ್ಲಿ ಶುಕ್ರವಾರ ಮನರೇಗಾ ಐಇಸಿ ಚಟುವಟಿಕೆಯಡಿ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯೆಡೆಗೆ ಅಭಿಯಾನದ ಉದ್ಯೋಗ ವಾಹಿನಿ ಜಾಗೃತಿ ರಥಕ್ಕೆ ತಾಪಂ ಇಒ ಯಶವಂತಕುಮಾರ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಇಒ ಯಶವಂತಕುಮಾರ ಮಾತನಾಡಿ ಉದ್ಯೋಗವನ್ನರಸಿ ನಗರ ಪ್ರದೇಶಗಳಿಗೆ ಗುಳೆ ಹೋಗುವ ವ್ಯವಸ್ಥೆ ನಿಯಂತ್ರಿಸಲು ನರೇಗಾದಡಿ ಉದ್ಯೋಗದ ಖಾತ್ರಿ ನೀಡಲು ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಠಿಸಲಾಗುತ್ತಿದೆ. ಗ್ರಾಮಗಳ ಅಭಿವೃದ್ಧಿಯೊಂದಿಗೆ ಅಲ್ಲಿನ ಶ್ರಮಿಕರಿಗೆ ಉದ್ಯೋಗ ಒದಗಿಸಿ ಆರ್ಥಿಕ ಭದ್ರತೆ ಒದಗಿಸುವ ನರೇಗಾ ಒಂದು ಉತ್ತಮ ಯೋಜನೆಯಾಗಿದೆ. 2024-25ನೇ ಸಾಲಿನ ಕಾರ್ಮಿಕರ ಆಯವ್ಯಯದ ಸಿದ್ಧತೆಗಾಗಿ ಜನರಲ್ಲಿ ಮನರೇಗಾ ಮಹತ್ವ ಮತ್ತು ವಿವಿಧ ಕಾಮಗಾರಿಗಳ ಕುರಿತು ವ್ಯಾಪಕ ಪ್ರಚಾರ ನಡೆಸಲು ಉದ್ಯೋಗ ವಾಹಿನಿ ಜಾಗೃತಿ ರಥಕ್ಕೆ ಚಾಲನೆ ನೀಡಲಾಗಿದೆ. ಸವದತ್ತಿ ತಾಲ್ಲೂಕಿನ 44 ಪಂಚಾಯಿತಿಗಳ ಎಲ್ಲ ಗ್ರಾಮಗಳಲ್ಲಿ ಉದ್ಯೋಗ ವಾಹಿನಿ ಜಾಗೃತಿ ರಥ ಸಂಚರಿಸಲಿದೆ ಎಂದರು. ಈ ವೇಳೆ ಎಡಿ ಆರ್.ಬಿ.ರಕ್ಕಸಗಿ ಐಇಸಿ ಸಂಯೋಜಕ ಮಲಿಕಜಾನ ಮೋಮಿನ ನಾಗರಾಜ ಬೆಹರೆ ಮಹಾದೇವ ಕಾಮನ್ನವರ ಮಹೇಶ ತೆಲಗಾರ ಡಿ.ಎಮ್. ಆನೂರ ಗಿರೀಶ ಮುನವಳ್ಳಿ ಹಾಗೂ ಪ್ರಮುಖರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.