ಎಂ.ಕೆ.ಹುಬ್ಬಳ್ಳಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಕಷ್ಟು ಮಹಿಳೆಯರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಈ ಯೋಜನೆಯು ಮಹಿಳೆಯರ ಸಬಲೀಕರಣದ ಜೊತೆಗೆ ಬಡ ಕುಟುಂಬಗಳಿಗೂ ಆರ್ಥಿಕ ಭದ್ರತೆ ಕಲ್ಪಿಸಿದೆ ಎಂದು ಯೋಜನೆಯ ಧಾರವಾಡ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್ ಹೇಳಿದರು.
ಪಟ್ಟಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಮಹಿಳೆಯರಿಗೆ ಹೊಲಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತರಬೇತಿಗೆ ಆಯ್ಕೆಯಾದ ಫಲಾನುಭವಿಗಳು ಆಸಕ್ತಿಯಿಂದ ತರಬೇತಿ ಪಡೆದು ಸ್ವ ಉದ್ಯೋಗ ಕೈಗೊಳ್ಳಬೇಕು ಎಂದು ತಿಳಿಸಿದರು.
ಎಂ.ಕೆ.ಹುಬ್ಬಳ್ಳಿ ಸೇರಿದಂತೆ ಮೂರು ಜ್ಞಾನ ವಿಕಾಸ ಕೇಂದ್ರಗಳ ವ್ಯಾಪ್ತಿಯ 30 ಮಹಿಳೆಯರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಅದೃಶ್ಯಾನಂದ ಗದ್ದಿಹಳ್ಳಿಶೆಟ್ಟಿ ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ ತಾಲ್ಲೂಕು ಯೋಜನಾಧಿಕಾರಿ ಸಂದೀಪ್ ನಾಯ್ಕ ಪಟ್ಟಣ ಪಂಚಾಯ್ತಿ ಸದಸ್ಯೆ ಸಾವಿತ್ರಿ ಹೊನ್ನಣ್ಣವರ ಒಕ್ಕೂಟದ ಅಧ್ಯಕ್ಷೆ ಛಾಯಾ ಹುದಲಿ ರಾಬಿಯಾ ಜ್ಞಾನವಿಕಾಸ ಸಮನ್ವಯಾಧಿಕಾರಿ ಸಾವಿತ್ರಿ ವಲಯ ಮೇಲ್ವಿಚಾರಕ ಜನಾರ್ಧನ್ ಪದಾಧಿಕಾರಿಗಳು ಸೇವಾ ಪ್ರತಿನಿಧಿಗಳು ಇದ್ದರು.
ಸೆ.8ಕ್ಕೆ ‘ಪರ್ಯಾಯ’ ಚಿತ್ರ ತೆರೆಗೆ
ಬೆಳಗಾವಿ: ‘ಬೆಳಗಾವಿಯ ಸಮಾನ ಮನಸ್ಕರು ಸೇರಿಕೊಂಡು ನಿರ್ಮಿಸಿದ ‘ಪರ್ಯಾಯ’ ಚಲನಚಿತ್ರ ಸೆಪ್ಟೆಂಬರ್ 8ರಂದು ರಾಜ್ಯದಾದ್ಯಂತ 70ಕ್ಕೂ ಅಧಿಕ ಚಲನಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ’ ಎಂದು ನಿರ್ದೇಶಕ ರಮಾನಂದ ಮಿತ್ರ ಹೇಳಿದರು.
ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿತ್ರವು ನೈಜ ಘಟನೆ ಆಧರಿಸಿದ ಕಥೆ ಒಳಗೊಂಡಿದ್ದು, ಖಾನಾಪುರ ತಾಲ್ಲೂಕಿನ ಚಿಗುಳೆ ಮತ್ತು ಬೆಳಗಾವಿ ನಗರದಲ್ಲಿ ಚಿತ್ರೀಕರಿಸಲಾಗಿದೆ. ‘ಮಮತಾ ಕ್ರಿಯೇಷನ್’ ಬ್ಯಾನರನಡಿ ನಿರ್ಮಾಣಗೊಂಡ ಈ ಚಿತ್ರದಲ್ಲಿ ಮೂರು ಪ್ರಮುಖ ಪಾತ್ರಗಳ ಮೂಲಕ ಕತೆ ಸಾಗಲಿದೆ. ಇಡೀ ಕುಟುಂಬ ನೋಡಬಹುದಾದ ಚಿತ್ರ ಇದಾಗಿದೆ ಎಂದರು.
ಸಹ ನಿರ್ಮಾಪಕ ಮುರುಗೇಶ ಶಿವಪೂಜಿ, ‘ಗಡಿಭಾಗದಲ್ಲಿ ನಿರ್ಮಾಣಗೊಂಡ ಚಿತ್ರವನ್ನು ಪ್ರೇಕ್ಷಕರು ಪ್ರೋತ್ಸಾಹಿಸಬೇಕು’ ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.