ADVERTISEMENT

ಸತ್ತಿಗೇರಿ ಗ್ರಾಮದೇವಿ ಜಾತ್ರೆ ವೈಭವ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 16:15 IST
Last Updated 13 ಏಪ್ರಿಲ್ 2024, 16:15 IST
ಸತ್ತಿಗೇರಿ ಗ್ರಾಮದಲ್ಲಿ ಶನಿವಾರ ಗ್ರಾಮದೇವಿಯ ಜಾತ್ರೆ ಅಂಗವಾಗಿ ಮೆರವಣಿಗೆ ನಡೆಯಿತು
ಸತ್ತಿಗೇರಿ ಗ್ರಾಮದಲ್ಲಿ ಶನಿವಾರ ಗ್ರಾಮದೇವಿಯ ಜಾತ್ರೆ ಅಂಗವಾಗಿ ಮೆರವಣಿಗೆ ನಡೆಯಿತು   

ಸತ್ತಿಗೇರಿ: ಸತ್ತಿಗೇರಿ ಗ್ರಾಮದಲ್ಲಿ ಐದು ವರ್ಷಗಳಿಗೊಮ್ಮೆ ನಡೆಯುವ 9 ದಿನಗಳ ಕಾಲ ಜರುಗಲಿರುವ ಗ್ರಾಮ ದೇವಿ ಜಾತ್ರಾ ಮಹೋತ್ಸವಕ್ಕೆ ಶನಿವಾರ ಸಂಭ್ರಮದ ಚಾಲನೆ ದೊರೆಯಿತು. ನಸುಕಿನ ಜಾವ ಜರುಗಿದ ದೇವಿಯ ವಿವಾಹ ಮಹೋತ್ಸವದಲ್ಲಿ ಅಪಾರ ಜನ ಪಾಲ್ಗೊಂಡರು.

ದ್ಯಾಮವ್ವ ಮಾತಾ ಕೀ ಜೈ, ದುರ್ಗಮ್ಮ ದೇವಿ ಕೀ ಜೈ ಘೋಷಣೆಗಳು ಮೊಳಗಿದವು. ದೇವದಾಸಿಯರ ಆವೇಶ ಭರಿತ ನರ್ತನ, ಡೊಳ್ಳು ಕುಣಿತ, ಚಂಡೆ ವಾದನ, ಪಂಚವಾದ್ಯ, ಪೂರ್ಣಕುಂಭ ಮೆರವಣಿಗೆ ಉತ್ಸವಕ್ಕೆ ಮೆರಗು ನೀಡಿದವು.

ದೇವಿಗೆ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪೂಜೆ ಸಲ್ಲಿಸಿದರು. ಭಕ್ತರು ದೇವಿ ಪೀಠವನ್ನು ತಲೆಯ ಮೇಲೆ ಹೊತ್ತು ಗದ್ದುಗೆಗೆ ತೆರಳಿದರು. ಗ್ರಾಮದಲ್ಲಿ ಜಾತ್ರೆಯ ಸಂಭ್ರಮ ಮನೆಮಾಡಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.