ADVERTISEMENT

ಹೂಲಿ ಅಜ್ಜನ ಅದ್ದೂರಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 14:51 IST
Last Updated 8 ಫೆಬ್ರುವರಿ 2024, 14:51 IST
ಸವದತ್ತಿ ತಾಲ್ಲೂಕಿನ ಹೂಲಿ ಗ್ರಾಮದ ಸಂಗಮೇಶ್ವರ ಶ್ರೀಗಳ 91ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ರಥೋತ್ಸವ ಜರುಗಿತು
ಸವದತ್ತಿ ತಾಲ್ಲೂಕಿನ ಹೂಲಿ ಗ್ರಾಮದ ಸಂಗಮೇಶ್ವರ ಶ್ರೀಗಳ 91ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ರಥೋತ್ಸವ ಜರುಗಿತು   

ಸವದತ್ತಿ: ತಾಲ್ಲೂಕಿನ ಹೂಲಿ ಗ್ರಾಮದ ಗುರು ಬಾಲಲೀಲಾ ಸಂಗಮೇಶ್ವರ ಸ್ವಾಮೀಜಿ 91ನೇ ಪುಣ್ಯ ಸ್ಮರಣೋತ್ಸವ ಹಾಗೂ ಹೂಲಿ ಅಜ್ಜನ ಮಠದ ಜಾತ್ರಾ ಮಹೋತ್ಸವದ ನಿಮಿತ್ತ ಗುರುವಾರ ರಥೋತ್ಸವ ಜರುಗಿತು.

ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಅಲಂಕೃತ ರಥದಲ್ಲಿ ಬಾಲಲೀಲಾ ಸಂಗಮೇಶ್ವರರ ಭಾವಚಿತ್ರವನ್ನು ಪ್ರತಿಷ್ಠಾಪಿಸಿ, ವಿವಿಧ ವಾದ್ಯ ಮೇಳದೊಂದಿಗೆ ಅದ್ಧೂರಿ ರಥೋತ್ಸವ ಜರುಗಿತು. ಸುತ್ತಲಿನ ಗ್ರಾಮಗಳ ಅಜ್ಜನ ಭಕ್ತರು ಆಗಮಿಸಿದ್ದರು. ಇಷ್ಟಾರ್ಥ ಸಿದ್ಧಿಗಾಗಿ ಉತ್ತತ್ತಿ, ಬಾಳೆಹಣ್ಣು ರಥಕ್ಕೆ ಎಸೆದು ಭಕ್ತಿ ಮೆರೆದರು. ರಥ ಎಳೆಯುತ್ತ ಭಕ್ತರು ‘ಹರಹರ ಮಹಾದೇವ’ ಎಂಬ ಘೋಷ ಮೊಳಗಿಸಿದರು.

ಗ್ರಾಮದಲ್ಲಿ ಕುಸ್ತಿ, ಟಗರಿನ ಕಾಳಗ, ಕುದುರೆ ಓಟ ಸೇರಿ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.