ADVERTISEMENT

ನಕಲಿ ವೈದ್ಯರು ನಡೆಸುತ್ತಿದ್ದ ಕ್ಲಿನಿಕ್‌:ಶಿವಾ ಕ್ಲಿನಿಕ್‌ ನೋಂದಣಿ ಶಾಶ್ವತ ರದ್ದು

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 16:38 IST
Last Updated 28 ಜೂನ್ 2024, 16:38 IST

ಬೆಳಗಾವಿ: ಅನುಮತಿ ಇಲ್ಲದೇ ಇಲ್ಲಿನ ಬಡಕಲ ಗಲ್ಲಿಯಲ್ಲಿ ನಡೆಸುತ್ತಿದ್ದ ‘ಶಿವಾ ಕ್ಲಿನಿಕ್’ನ ನೋಂದಣಿಯನ್ನು ಶಾಶ್ವತವಾಗಿ ರದ್ದುಗೊಳಿಸಿ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಆದೇಶ ಹೊರಡಿಸಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಈಚೆಗೆ ಕಾರ್ಯಾಚರಣೆ ನಡೆಯಿಸಿ ಮೂರು ಕ್ಲಿನಿಕ್‌ಗಳಿಗೆ ಬೀಗ ಜಡಿದಿದ್ದರು. ಶುಕ್ರವಾರ ವಿಚಾರಣೆ ನಡೆಸಿದ ಕರ್ನಾಟಕ ಖಾಸಗಿ ಸಂಸ್ಥೆಗಳ ನೋಂದಣಿ ಹಾಗೂ ಕುಂದು ಕೊರತೆ ನಿವಾರಣಾ ಪ್ರಾಧಿಕಾರ ನ್ಯಾಯಾಲಯದಲ್ಲಿ, ಕ್ಲಿನಿಕ್‌ಗಳ ನೋಂದಣಿ ರದ್ದು ಮಾಡಿ, ಮಾಲೀಕರಾದ ಡಾ.ಎಸ್.ಎ. ದೇವಗಾನಿ ಅವರಿಗೆ ₹50 ಸಾವಿರ ದಂಡ ವಿಧಿಸಲಾಗಿದೆ.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಕಾಯ್ದೆ ಉಲ್ಲಂಘಿಸಿದ ಡಾ.ಎಸ್.ಎ. ದೇವಗಾನಿ ಅವರ ಕೆ.ಎಂ.ಸಿ ನೊಂದಣಿಯನ್ನು ರದ್ದುಗೊಳಿಸಲು ಕರ್ನಾಟಕ ವೈದ್ಯಕೀಯ ಮಂಡಳಿಗೆ ಶಿಫಾರಸು ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ADVERTISEMENT

‘ಚಿರಾಯು’ ಆಯುಷ್‌ ತೆರಪಿ ಸೆಂಟರ್ ಹಾಗೂ ‘ಗುರುಕೃಪ ಆಸ್ಪತ್ರೆ’ಗಳಿಗೆ ಈಗಾಗಲೇ ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ತಾಲ್ಲೂಕು ಕೆ.ಪಿ.ಎಂ.ಇ ಪ್ರಾಧಿಕೃತ ಅಧಿಕಾರಿಗಳು ನೀಡಿರುವ ನೋಟಿಸ್‌ಗೆ ಆಸ್ಪತ್ರೆಗೆಳ ಮಾಲೀಕುರು ಸಮರ್ಪಕ ಉತ್ತರ ಸಲ್ಲಿಸದಿದ್ದಲ್ಲಿ ಎರಡೂ ಸಂಸ್ಥೆಗಳ ನೋಂದಣಿಯನ್ನು ಕಾಯಂ ರದ್ದಗೊಳಿಸುವುದಾಗಿ ಆದೇಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.