ಬೆಳಗಾವಿ: ನಿವೃತ್ತ ಶಿಕ್ಷಕ, ಸಾಹಿತಿ ಶಿವಶಂಕರ ಅರಳಿಮಟ್ಟಿ (96) ಅವರು ಅನಾರೋಗ್ಯದಿಂದ ಗುರುವಾರ ಇಲ್ಲಿನ ರಾಣಿ ಚೆನ್ನಮ್ಮ ನಗರದ ಸ್ವಗೃಹದಲ್ಲಿ ನಿಧನರಾದರು. ಅವರ ಇಚ್ಛೆಯಂತೆ ಪ್ರಾರ್ಥಿವ ಶರೀರವನ್ನು ಕೆಎಲ್ಇ ಸಂಸ್ಥೆಯ ಜವರಲಾಲ್ ನೆಹರೂ ಮೆಡಿಕಲ್ ಕಾಲೇಜಿಗೆ ಅರ್ಪಿಸಲಾಗಿದೆ.
ಅಥಣಿ ಮೂಲದವರಾದ ಅವರು, ಸೇಂಟ್ ಫಾಲ್ ಮತ್ತು ಕೆಎಲ್ಇ ಸಂಸ್ಥೆಯ ಜಿ.ಎ. ಹೈಸ್ಕೂಲಿನಲ್ಲಿ ಶಾರೀರಿಕ ಶಿಕ್ಷಣ ಮತ್ತು ವಿಜ್ಞಾನ ಬೋಧಕರಾಗಿ ಸೇವೆ ಸಲ್ಲಿಸಿದ್ದರು. ‘ಕ್ರೀಡಾಂಗಣ’ ಮಾಸಪತ್ರಿಕೆ ಸಂಪಾದಕರಾಗಿ, ಉದಯ ಪ್ರಕಾಶನ ಸಂಸ್ಥೆ ಪ್ರಾರಂಭಿಸಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದರು. 1960ರಲ್ಲಿ ತೆರೆಕಂಡ ‘ಸಂಗೊಳ್ಳಿ ರಾಯಣ್ಣ’ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು. ಅವರಿಗೆ ಪತ್ನಿ, ಮೂವರು ಪುತ್ರರು ಇದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.