ADVERTISEMENT

ನಿವೇಶನ ವಿವಾದ: ಎರಡು ಗುಂಪುಗಳ ನಡುವೆ ಗಲಾಟೆ; ಕೊಂಡಸಕೊಪ್ಪದಲ್ಲಿ ಪೊಲೀಸ್‌ ಕಾವಲು

ಗ್ರಾ.ಪಂ ಉಪಾಧ್ಯಕ್ಷನ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 13:40 IST
Last Updated 19 ಸೆಪ್ಟೆಂಬರ್ 2024, 13:40 IST
<div class="paragraphs"><p>ಭೀಮಾಶಂಕರ ಗುಳೇದ</p></div>

ಭೀಮಾಶಂಕರ ಗುಳೇದ

   

ಬೆಳಗಾವಿ: ತಾಲ್ಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ಗುರುವಾರ ನಿವೇಶನ ವಿಚಾರಕ್ಕೆ ನಡೆದ ಜಗಳದಲ್ಲಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸೇರಿ ನಾಲ್ವರ ಮೇಲೆ ಹಲ್ಲೆ ಮಾಡಲಾಗಿದೆ.

ಬಸ್ತವಾಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿಠ್ಠಲ ಸಾಂಬ್ರೇಕರ್ ಅವರ ತಲೆಗೆ ತೀವ್ರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಮೂವರು ಸ್ನೇಹಿತರು ಚಿಕಿತ್ಸೆ ಪಡೆದು ಮರಳಿದ್ದಾರೆ.

ADVERTISEMENT

ಕೊಂಡಸಕೊಪ್ಪದವರಾದ ಪುಂಡಲೀಕ ಕುಡಚೇಕರ, ಭೀಮಾ ದೇಮನ್ನವರ, ನಾಗಪ್ಪ ವಾಳಕೆ, ಗಜು ಡೋಂಗ್ರೆ, ಮೋನಪ್ಪ ಗುಜರಾನಟ್ಟಿ, ಶಂಕರ ಪಾಟೀಲ ಆರೋಪಿಗಳು. ಈಗಾಗಲೇ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ತವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೊಂಡಸಕೊಪ್ಪ ಗ್ರಾಮದಲ್ಲಿ ಮಂದಿರ ನಿರ್ಮಾಣಕ್ಕೆ ವಿಠ್ಠಲ ಅವರು ಜಾಗ ಕೊಟ್ಟಿದ್ದರು. ಅದಕ್ಕೆ ಬದಲಿಯಾಗಿ ಬೇರೆಗೆ ಅವರಿಗೆ ಜಾಗ ಒದಗಿಸಲಾಗಿದೆ. ಆ ಜಾಗದಲ್ಲಿ ಮನೆ ಕಟ್ಟಲು ಶುರು ಮಾಡಿದ್ದರಿಂದ ವಿರೋಧಿ ಗುಂಪಿನವರು ತಕರಾರು ತೆಗೆದರು.

ಗುರುವಾರ ಈ ಜಗಳ ತೀವ್ರವಾಗಿ ಎರಡು ಗುಂಪುಗಳ ಮಧ್ಯೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ವಿಠ್ಠಲ ಅವರ ಮನೆಗೆ ನುಗ್ಗಿದ ಆರೋಪಿಗಳು ಕಟ್ಟಿಗೆ, ಇಟ್ಟಿಗೆ, ಕಲ್ಲಿನಿಂದ ದಾಳಿ ಮಾಡಿತು ಎಂದು ತಿಳಿಸಲಾಗಿದೆ.

ವಿಠ್ಠಲ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಹಿರೇಬಾಗೇವಾಡಿ ಪೊಲೀಸರು ಗ್ರಾಮದಲ್ಲಿ ಬಂದೊಬಸ್ತ್‌ ಮಾಡಿದ್ದಾರೆ.

ವಿಠ್ಠಲ ಸಾಂಬ್ರೇಕರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.