ಬೆಳಗಾವಿ: ‘ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿಶಾಲಾ ಮಕ್ಕಳು ತ್ವರಿತಗತಿಯಲ್ಲಿ ಪಠ್ಯವನ್ನು ಗ್ರಹಿಸಲು ಡಿಜಿಟಲ್ ಸ್ಮಾರ್ಟ್‌ಕ್ಲಾಸ್‌ಗಳು ಅಗತ್ಯ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕುಕಡೊಳ್ಳಿ ಗ್ರಾಮದ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆಯಲ್ಲಿ ಎರಡು ಹೈಟೆಕ್ ಡಿಜಿಟಲ್ ಸ್ಮಾರ್ಟ್‌ಕ್ಲಾಸ್‌ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ತಂತ್ರಜ್ಞಾನ ವಲಯದಲ್ಲಿ ಆಗುತ್ತಿರುವ ಭಾರಿ ಬದಲಾವಣೆಗಳು ಶಿಕ್ಷಣ ವಲಯವನ್ನು ಸಹ ಪ್ರಭಾವಿಸುತ್ತಿವೆ. ಕಲಿಕೆ, ಬೋಧನೆ, ಪಠ್ಯಕ್ರಮದಲ್ಲಿ ಹೊಸಸಂಚಲನವನ್ನು ಉಂಟುಮಾಡುತ್ತಿವೆ. ಹೀಗಾಗಿ, ಮಕ್ಕಳು ಡಿಜಿಟಲ್ ಶಿಕ್ಷಣಕ್ಕೆ ಆಸಕ್ತಿ ವಹಿಸಬೇಕು’ ಎಂದು ಕಿವಿಮಾತು ಹೇಳಿದರು.
ಗ್ರಾಮದ ಹಿರಿಯರಾದ ಕರೆಮ್ಮ ಹುಚ್ಚನವರ, ಈರನಗೌಡ ಪಾಟೀಲ, ಮಲ್ಲೇಶಿ ಗಿರಿಯಾಲ, ರಮೇಶ ಮರಕಟ್ಟಿ, ಶಿವಪ್ಪ ಕುಂಬಾರ, ಮಂಜುನಾಥ ಹುಬ್ಬಳ್ಳಿ, ರಮೇಶ ವಡ್ಡಿನ, ಮಂಜುನಾಥ ಬೈರೋಜಿ, ತಾಯಪ್ಪ ಮರಕಟ್ಟಿ, ನಾಗೇಶ, ಮಾರುತಿ ಸಾರಾವರಿ, ಗದಿಗೆಪ್ಪ ವಡ್ಡಿನ, ಸುರೇಶ ಸಕ್ರಪ್ಪನವರ, ಎಸ್‌ಡಿಎಂಸಿ ಅಧ್ಯಕ್ಷರು, ಶಾಲಾ ಮಕ್ಕಳು, ಜ್ಞಾನಸುಧಾ ಇನ್ನೋವೇಟಿವ್ ಸೊಲ್ಯೂಷನ್ಸ್ ಸಿಇಒ ರೋಹಿತ್ ಡಿ.ಎಂ., ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಡಿ.ಎಂ., ಶಾಲಾ ಸಿಬ್ಬಂದಿ ಇದ್ದರು.
ರಸ್ತೆ ನಿರ್ಮಾಣಕ್ಕೆ ಚಾಲನೆ: ತಾಲ್ಲೂಕಿನ ಕೆ.ಕೆ.ಕೊಪ್ಪ ಗ್ರಾಮದಲ್ಲಿ ₹ 38 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯ ನಿರ್ಮಾಣ ಕಾಮಗಾರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.
ಗ್ರಾಮದ ಮುಖಂಡರಾದ ಕಲ್ಲಪ್ಪ ಸಂಪಗಾಂವಿ, ದುಂಡಪ್ಪ ಹಲಕಿ, ಗದಗಯ್ಯ ಹಿರೇಮಠ, ಸಂತೋಷ ಕಂಬಿ, ರಾಮನಗೌಡ ಪಾಟೀಲ, ನಿಂಗಪ್ಪ ತಳವಾರ, ನಿಂಗಪ್ಪ ಹೊನ್ನಿಹಾಳ, ಸೋಮಯ್ಯ ಕಂಬಿ, ನಿಂಗಪ್ಪ ವಾಲಿ, ಬಸವರಾಜ ಡೊಂಗರಗಾವಿ, ಸುವರ್ಣ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.