ಸಂಕೇಶ್ವರ: ಕಳೆದ ವರ್ಷ ಸಂಕೇಶ್ವರ ಪಟ್ಟಣದಲ್ಲಿ ಅಕ್ಟೋಬರ್‌ನಲ್ಲಿ ಆರಂಭವಾಗಿದ್ದ ಸ್ವಚ್ಛ ಸಂಕೇಶ್ವರ ಅಭಿಯಾನದ ಎರಡನೇ ಹಂತದ ಕಾರ್ಯಕ್ರಮಕ್ಕೆ ನ. 24 ರಂದು ಬೆಳಿಗ್ಗೆ 8 ಗಂಟೆಗೆ ಇಲ್ಲಿನ ದುರುದುಂಡೀಶ್ವರ ಮಠದಿಂದ ಚಾಲನೆ ಸಿಗಲಿದೆ.
ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಹಸಿರು ನ್ಯಾಯಪೀಠದ ಅಧ್ಯಕ್ಷ ಸುಭಾಷ ಆಡಿ, ಶಾಸಕ ನಿಖಿಲ್ ಕತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ, ಕ್ಯಾನ್ಸರ್ ತಜ್ಞ ಡಾ.ಶರದ ದೇಸಾಯಿ, ಸಂಕೇಶ್ವರ ಪುರಸಭೆಯ ಅಧ್ಯಕ್ಷೆ ಸೀಮಾ ಹತನೂರಿ ಪಾಲ್ಗೊಳ್ಳಲಿದ್ದು, ನಿಡಸೋಸಿ ದುರುದುಂಡೀಶ್ವರ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಶ್ರೀ ಅಧ್ಯಕ್ಷತೆ ವಹಿಸಲಿದ್ದಾರೆ.
ದ್ವಿತೀಯ ಹಂತದ ಅಭಿಯಾನದಲ್ಲಿ 25 ಭಾನುವಾರ 25 ವಾರ್ಡ್‌ಗಳಲ್ಲಿ ಬೆಳಿಗ್ಗೆ ಶ್ರಮದಾನ, 25 ಶಾಲೆಗಳಲ್ಲಿ ಸ್ವಚ್ಛ ಮನಸ್ ಕಾರ್ಯಕ್ರಮ, 25 ಸ್ವಚ್ಛ ಸತ್ಸಂಗ ಜಾಗ್ರತಿ ಕಾರ್ಯಕ್ರಮ, ಮನೆ ಮಟ್ಟದಲ್ಲಿ ಕಸ ನಿರ್ವಹಣೆಗಾಗಿ ಮಡಕೆಗಳ ಪ್ರಾತ್ಯಕ್ಷಿಕೆ, ಭಾಷಣ, ಪ್ರಬಂಧ, ಚಿತ್ರಕಲಾ ಸ್ಪರ್ಧೆ ಹಾಗೂ ಸ್ವಚ್ಛತೆಗಾಗಿ ಓಟದಂಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸ್ವಚ್ಛ ಸಂಕೇಶ್ವರ ಫೌಂಡೇಷನ್‌ನ ಡಾ.ರಮೇಶ ದೊಡಭಂಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.