ADVERTISEMENT

ಪ್ರವಾಹ ಎದುರಿಸಲು ಕ್ರಮ ಕೈಗೊಳ್ಳಿ: ತಹಶೀಲ್ದಾರ್‌ ಮಂಜುಳಾ ನಾಯಿಕ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 15:45 IST
Last Updated 29 ಜೂನ್ 2024, 15:45 IST
ಸಂಕೇಶ್ವರ ಬಳಿ ಇರುವ ಹಿರಣ್ಯಕೇಶಿ ನದಿಯ ಪ್ರವಾಹವನ್ನು ತಹಶೀಲ್ದಾರ್‌ ಮಂಜುಳಾ ನಾಯಿಕ  ವೀಕ್ಷಿಸಿದರು
ಸಂಕೇಶ್ವರ ಬಳಿ ಇರುವ ಹಿರಣ್ಯಕೇಶಿ ನದಿಯ ಪ್ರವಾಹವನ್ನು ತಹಶೀಲ್ದಾರ್‌ ಮಂಜುಳಾ ನಾಯಿಕ  ವೀಕ್ಷಿಸಿದರು   

ಸಂಕೇಶ್ವರ: ಮಹಾರಾಷ್ಟ್ರದ ಅಂಬೋಲಿ ಘಟ್ಟ ಪ್ರದೇಶದಲ್ಲಿ ರಭಸದಿಂದ ಮಳೆಯಾಗುತ್ತಿರುವ
ಹಿನ್ನಲೆಯಲ್ಲಿ ಸಂಕೇಶ್ವರ ಪಟ್ಟಣದ ಹರಿಯುವ ಹಿರಣ್ಯಕೇಶಿ ನದಿ ತುಂಬಿ ಹರಿಯುತಿದ್ದು ಭವಿಷ್ಯದಲ್ಲಿ ಪ್ರವಾಹ ಭೀತಿ ಎದುರಿಸಲು ಈಗಿನಿಂದಲೇ ತಾಲ್ಲೂಕು ಆಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದ್ದು,
ಹುಕ್ಕೇರಿ ತಹಶೀಲ್ದಾರ್‌ ಮಂಜುಳಾ ನಾಯಿಕ ಅವರು ಶನಿವಾರ ಸಂಕೇಶ್ವರಕ್ಕೆ ಭೇಟಿ ನೀಡಿ ಹಿರಣ್ಯಕೇಶಿ ನದಿಯ ನೀರಿನ ಮಟ್ಟ ವಿಕ್ಷಿಸಿದರು.

ಮುಂದಿನ ದಿನಗಳಲ್ಲಿ ಹಿರಣ್ಯಕೇಶಿ ನದಿಗೆ ಹೆಚ್ಚು ನೀರು ಬಂದರೆ ನದಿ ಗಲ್ಲಿ, ಶಂಕರಲಿಂಗ ಮಠ, ಹೊಸ ಓಣಿಯ ತುಂಬ ನೀರು ಬರುವ ಸಾಧ್ಯತೆ ಇದ್ದು ಈಗಿನಿಂದಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಸ್ಥಳೀಯ ಪುರಸಭೆ ಸಿಬ್ಬಂದಿಗೆ ಸೂಚಿಸಿದರು.

ಈಗಾಗಲೇ ಸಂಕೇಶ್ವರ ಪುರಸಭೆ ವತಿಯಿಂದ ನದಿ ಪಾತ್ರದ ಇಕ್ಕೆಲಗಳಲ್ಲಿ ಆಳವಾಗಿ ತೆಗ್ಗು ತೆಗೆದು ಸ್ವಚ್ಛ ಮಾಡಲಾಗಿದೆ. ಜನರು ಪ್ರವಾಹ ಬರುವುದಕ್ಕಿಂತ ಮುಂಚೆಯೇ ಸುರಕ್ಷಿತ ಸ್ಥಳಗಳಲ್ಲಿ ಇರಲು ಸೂಚಿಸಲಾಗಿದೆ ಎಂದು ಪುರಸಭೆಯ ಸಿಬ್ಬಂದಿ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.