ADVERTISEMENT

ಸವದತ್ತಿ | ಟ್ಯಾಂಕರ್‌ ಪಲ್ಟಿ: ಅರ್ಧಕ್ಕಿಂತ ಹೆಚ್ಚು ಇಂಧನ ಸೋರಿಕೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 14:03 IST
Last Updated 29 ಮಾರ್ಚ್ 2024, 14:03 IST

ಸವದತ್ತಿ: ಸವದತ್ತಿಯಿಂದ ಮುನವಳ್ಳಿಯ ಮಾರ್ಗ ಮಧ್ಯದಲ್ಲಿನ ಇಳಿಜಾರು ಪ್ರದೇಶದಲ್ಲಿ ಸೀತಾರಾಮ್ ಕ್ರಾಸ್ ಬಳಿ ಗುರುವಾರ ಸಂಜೆ ಇಂಧನ ತುಂಬಿದ ಟ್ಯಾಂಕರ್‌ ಅಪಘಾತಕ್ಕೀಡಾಗಿ ಉರುಳಿ ಬಿದ್ದಿದೆ.

ಟ್ಯಾಂಕರ್‌ನಲ್ಲಿದ್ದ 8 ಸಾವಿರ ಲೀ ಡೀಸೆಲ್ ಮತ್ತು 4 ಸಾವಿರ ಲೀ ಪೆಟ್ರೋಲ್ ಪೈಕಿ ಅರ್ಧಕ್ಕಿಂತ ಹೆಚ್ಚು ಇಂಧನ ಸೋರಿಕೆಯಾಗಿದೆ.


ಟ್ಯಾಂಕರ್‌ ನಡೆಸುವಾಗ ರಸ್ತೆಯಲ್ಲಿ ಅಡ್ಡಲಾಗಿ ಬಂದ ಕಾರನ್ನು ರಕ್ಷಿಸಲು ಹೋಗಿ ಈ ಅವಘಡ ಸಂಭವಿಸಿದೆ ಎಂದು ಟ್ಯಾಂಕರ್‌ ಚಾಲಕ ತಿಳಿಸಿದ್ದಾಗಿ ಪೋಲಿಸ್ ಮತ್ತು ಅಗ್ನಿ ಶಾಮಕ ಇಲಾಖೆ ತಿಳಿಸಿವೆ.

ADVERTISEMENT

ಹುಬ್ಬಳ್ಳಿಯ ರಾಯಾಪೂರದಿಂದ ಮುಧೋಳಗೆ ಸಾಗಿಸುವ ವೇಳೆ ಈ ಘಟನೆ ನಡೆದಿದ್ದು, ರಸ್ತೆಯ ಎಡಬದಿ ತಗ್ಗಿನಲ್ಲಿ ವಾಹನ ನೆಲಕ್ಕುರುಳಿ ಪಲ್ಟಿಯಾಗಿದೆ.

ಪಲ್ಟಿಯಾದ ಟ್ಯಾಂಕರ್‌ನಲ್ಲಿ ಸಿಲುಕಿದ ಚಾಲಕ ಮತ್ತು ಕ್ಲೀನರ್‌ ಇಬ್ಬರನ್ನೂ ರಕ್ಷಿಸಲಾಗಿದ್ದು, ಇಬ್ಬರಿಗೂ ಗಂಭೀರ ಗಾಯಗಳಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಇಲ್ಲಿನ ಪೊಲೀಸ್ ಇಲಾಖೆ ರಸ್ತೆ ಸಂಚಾರ ದಟ್ಟನೆ ನಿಯಂತ್ರಿಸಿ ಇಂಧನ ಸೋರಿಕೆಯಿಂದ ಆಗುವ ಹೆಚ್ಚಿನ ಅನಹುತವನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಅಪಘಾತ ಸಂಭವಿಸಿದ ತಕ್ಷಣ ಟ್ಯಾಂಕರ್‌ ಅನ್ನು ಮತ್ತೆ ಮುನವಳ್ಳಿ ಬಂಕ್ ಒಂದಕ್ಕೆ ಸಾಗಿಸಲಾಗಿದೆ. ಈ ಕುರಿತು ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.