ಬೆಳಗಾವಿ: ಇಲ್ಲಿನ ‘ಬೆಳಗಾಂ ಕ್ಲಬ್’ ವತಿಯಿಂದ ಅಂತರರಾಜ್ಯ ಟೆನ್ನಿಸ್ ಪಂದ್ಯಾವಳಿಯನ್ನು ಈಚೆಗೆ ಯಶಸ್ವಿಯಾಗಿ ನಡೆಸಲಾಯಿತು.
ಉದ್ಘಾಟಿಸಿದ ಕ್ಲಬ್ ಅಧ್ಯಕ್ಷರೂ ಆಗಿರುವ ಉತ್ತರ ವಲಯ ಐಜಿಪಿ ಎನ್. ಸತೀಶ್‌ಕುಮಾರ್, ‘ಕ್ರೀಡಾಕೂಟಗಳನ್ನು ಆಯೋಜಿಸಿರುವುದು ಜನಸಾಮಾನ್ಯರಲ್ಲಿ ಕ್ರೀಡೆ ಹಾಗೂ ಆರೋಗ್ಯ ವರ್ಧನೆ ಬಗ್ಗೆ ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ’ ಎಂದು ಹೇಳಿದರು.
ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾದ 250 ಸ್ಪರ್ಧಿಗಳು ಭಾಗವಹಿಸಿದ್ದರು. 130ಕ್ಕೂ ಹೆಚ್ಚು ಸುತ್ತು ಆಟಗಳು ನಡೆದವು.
ಮುಕ್ತ ಸ್ಪರ್ಧೆಯಲ್ಲಿ ದಾವಣಗೆರೆಯ ಅಲೋಕ್ ಆರಾಧ್ಯ ಹಾಗೂ ನೇಸರ ಜಾವೂರ್ ವಿಜೇತರಾದರು. ಧಾರವಾಡದ ಅಮರ್ ಹಾಗೂ ಬಸವರಾಜ ಜೋಡಿ 2ನೇ ಸ್ಥಾನ ಪಡೆಯಿತು.
35 ವರ್ಷ ಮೇಲಿನವರ ವಿಭಾಗದಲ್ಲಿ ತುಮಕೂರಿನ ಚೇತನ್ ಜಿ.ಬಿ. ಹಾಗೂ ಕುಮಾರಸ್ವಾಮಿ ತಂಡವು ಬಾಗಲಕೋಟೆಯ ಮಲ್ಲು ಯಾದವ್–ಸುಜಯ ಯಾದ್ಗೀರ್ ತಂಡವನ್ನು ಮಣಿಸಿತು.
45 ವರ್ಷ ಮೇಲಿನವರ ವಿಭಾಗದಲ್ಲಿ ಬೆಳಗಾವಿಯ ಸಂದೀಪ್ ಬೆಳ್ಳುಡ್ಡಿ ಹಾಗೂ ಯಶವಂತ ಮೋಹತ ತಂಡ ದಾವಣಗೆರೆಯ ಆನಂದ್ ಜಕಾತಿ ಮತ್ತು ಅನಿಲ್ ಅವರನ್ನು ಸೋಲಿಸಿತು. 55 ವರ್ಷ ಮೇಲಿನವರ ವಿಭಾಗದಲ್ಲಿ ಧಾರವಾಡದ ಜಗದೀಶ್ ನಿರದಿ ಹಾಗೂ ನಂದಕುಮಾರ ತಂಡವು ವೀರೇಶ್ ಕೆಲಗೇರಿ ಹಾಗೂ ರಾಜಬನ್ಸಿ ತಂಡದ ವಿರುದ್ಧ ಗೆದ್ದಿತು.
ವಿಜೇತರ ತಂಡಗಳಿಗೆ ₹ 10ಸಾವಿರ ಹಾಗೂ ಟ್ರೋಫಿ, 2ನೇ ಸ್ಥಾನ ಗಳಿಸಿದ ತಂಡಗಳಿಗೆ ₹ 7ಸಾವಿರ ಬಹುಮಾನ ಹಾಗೂ ಟ್ರೋಫಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.