ಬೈಲಹೊಂಗಲ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಭಾನುವಾರ ಸಂಜೆ ಏಕಾಏಕಿ ಮಳೆ ಸುರಿಯಿತು.
ಅರ್ಧಟೆ ಕಾಲ ಸುರಿದ ಮಳೆಯಿಂದಾಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯ್ದು ನಿಂತಿದ್ದ ಪ್ರಯಾಣಿಕರು ಬಸ್ಸಿಲ್ಲದೆ ಚಡಪಡಿಸಿದರು. ಜೋರಾದ ಮಳೆಯಲ್ಲಿ ರೀಕ್ಷಾಗಳ ಓಡಾಟ ಜೋರಾಗಿತ್ತು.
ಆರಂಭದಲ್ಲಿ ಜಿಟಿಜಿಟಿ ಮಳೆಯೊಂದಿಗೆ ಆರಂಭವಾದ ಮಳೆ ನಂತರ 20 ನಿಮಿಷಗಳ ಕಾಲ ಸುರಿಯಿತು. ಇಂಚಲ ಕ್ರಾಸ್, ಬಸ್ ನಿಲ್ದಾಣ, ರಾಯಣ್ಣ ವೃತ್ತದ ಮುಖ್ಯ ರಸ್ತೆಯ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಇಡೀ ರಾತ್ರಿ ಮೋಡ ಕವಿದ ವಾತಾವರಣ ನಡುವೆ ಗುಡುಗು, ಮಿಂಚು ಆರ್ಭಟಿಸಿತು. ಅಲ್ಲಲ್ಲಿ ಸಿಡಿಲು ಬಡಿದ ವರದಿ ಆಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.