ADVERTISEMENT

ತರಬೇತಿ ಶಿಬಿರದ ಲಾಭ ಪಡೆಯಲು ಸಲಹೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 14:44 IST
Last Updated 15 ನವೆಂಬರ್ 2024, 14:44 IST
ಚನ್ನಮ್ಮನ ಕಿತ್ತೂರಿನಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ಒಂದು ದಿನದ ಪರೀಕ್ಷೆ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು
ಚನ್ನಮ್ಮನ ಕಿತ್ತೂರಿನಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ಒಂದು ದಿನದ ಪರೀಕ್ಷೆ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು   

ಚನ್ನಮ್ಮನ ಕಿತ್ತೂರು: ‘ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಎನ್ಎನ್ಎಂಎಸ್ ಪರೀಕ್ಷೆಯ ಒಂದು ದಿನದ ಶಿಬಿರ ಆಯೋಜಿಸಲಾಗಿದೆ. ಇದರ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವೈ.ತುಬಾಕದ ಸಲಹೆ ನೀಡಿದರು.

ಇಲ್ಲಿಯ ರಾಜಗುರು ಗುರುಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯ ಅಧಿಕಾರಿ ಹಾಗೂ ಧಾರವಾಡ ಸ್ಫೂರ್ತಿ ಕರಿಯರ್ ಅಕಾಡೆಮಿ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಉಚಿತ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

‘ನಿರಂತರ ಪ್ರಯತ್ನ, ಶಿಸ್ತು ಬದ್ಧ ಕೆಲಸದ ಮೂಲಕ ಯಶಸ್ಸು ಗಳಿಸಬಹುದು. ಸಮಯದ ಸದುಪಯೋಗವು ಇಲ್ಲಿ ಮುಖ್ಯವಾಗಿರುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಎಸ್.ಬಿ.ಎಂ.ಜಿ.ಜಿ. ಪ್ರೌಢಶಾಲೆಯ ಪ್ರಧಾನ ಶಿಕ್ಷಕ ಎಂ.ಎನ್.ಚನ್ನಂಗಿ ಮಾತನಾಡಿ, ‘ಮಾಧ್ಯಮಿಕ ಹಂತದ ಶಾಲಾ ಕಲಿಕೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುವುದರಿಂದ ಜೀವನದಲ್ಲಿ ಯಶಸ್ವಿಯಾಗಲು ಹೆಚ್ಚಿನ ಅವಕಾಶವಿದೆ’ ಎಂದರು.

ಕಾಶಿರಾಜ ಮತ್ತು ಸ್ಪೂರ್ತಿ ಅಕಾಡೆಮಿ ನಿರ್ದೇಶಕ ಪ್ರದೀಪ್ ಎಸ್.ಎಂ.ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ನೋಡಲ್ ಅಧಿಕಾರಿ ಸ್ನೇಹಲ್ ಪೂಜಾರಿ, ಎಂ. ವೈ. ಕಡಕೋಳ, ಬಿಆರ್ ಸಿ ಎಲ್. ಎಂ. ಕುರಬೆಟ್, ಸುನೀತಾ ಪರಪ್ಪನ್ನವರ, ಜ್ಯೋತಿ ಕೋಟಗಿ, ಭುವನಾ ಹಿರೇಮಠ, ಸಿ.ಆರ್.ಪಿ.ಗಳು ಎನ್.ಎಂ.ಎಮ್.ಎಸ್. ನೋಡಲ್ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.