ADVERTISEMENT

ರಾಮದುರ್ಗ | ಪೇಜಾವರ ವಿಶ್ವಪ್ರಸನ್ನ ತೀರ್ಥರ ಪುರಪ್ರವೇಶ: ಅದ್ದೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 27 ಮೇ 2024, 15:28 IST
Last Updated 27 ಮೇ 2024, 15:28 IST
ರಾಮದುರ್ಗಕ್ಕೆ ಭೇಟಿ ನೀಡಿದ್ದ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರನ್ನು ಭಕ್ತರು ಭವ್ಯ ಮೆರವಣಿಗೆಯಲ್ಲಿ ಕರೆ ತಂದರು
ರಾಮದುರ್ಗಕ್ಕೆ ಭೇಟಿ ನೀಡಿದ್ದ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರನ್ನು ಭಕ್ತರು ಭವ್ಯ ಮೆರವಣಿಗೆಯಲ್ಲಿ ಕರೆ ತಂದರು   

ರಾಮದುರ್ಗ: ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಸೋಮವಾರ ರಾಮದುರ್ಗ ಪಟ್ಟಣಕ್ಕೆ ಆಗಮಿಸಿದಾಗ ಬ್ರಾಹ್ಮಣ ಸಮಾಜದ ಪ್ರಮುಖರು ಅದ್ದೂರಿ ಸ್ವಾಗತ ಕೋರಿದರು.

ಸಾರೋಟನಲ್ಲಿ ಆಸೀನರಾಗಿದ್ದ ಪೇಜಾವರ ಶ್ರೀಗಳನ್ನು ಮತ್ತು ವಿಶ್ವೇಶ ತೀರ್ಥರ ಭಾವಚಿತ್ರವನ್ನು ತೆರದ ಜೀಪಿನಲ್ಲಿ ಇಟ್ಟು ಭವ್ಯ ಮೆರವಣಿಗೆಯಲ್ಲಿ ಕರೆ ತರಲಾಯಿತು. ಮೆರವಣಿಗೆಯು ಇಲ್ಲಿನ ವೆಂಕಟೇಶ್ವರ ದೇವಸ್ಥಾನದಿಂದ ತೇರ ಬಜಾರ, ರಾಘವೇಂದ್ರ ರಥ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಸುಮಂಗಲೆಯರು ಪೂರ್ಣಕುಂಭ ಮೇಳೆ, ಡೊಳ್ಳು, ಜಾಂಜ್‌ ಪದಕಗಳ ಸದ್ದು ಮೊಳಗಿದವು. ಮಹಿಳೆಯರು ಆರತಿ ಹಿಡಿದು ಸಾಗಿದರು. ಭಕ್ತರು ಮತ್ತು ಮಕ್ಕಳು ಸಾಂಪ್ರದಾಯಿಕ ಉಡುಪು ತೊಟ್ಟು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮತ್ತು 48 ದಿನಗಳ ಕಾಲ ಮಂಡಲ ಪೂಜೆ ನೆರವೇರಿಸಿದ ಪೇಜಾವರ ಶ್ರೀಗಳನ್ನು ಬ್ರಾಹ್ಮಣ ಸಮಾಜ ಮತ್ತು ಹಿಂದೂ ಸಂಘಟನೆಗಳ ಪದಾಧಿಕಾರಿಗಳು ಇಲ್ಲಿನ ರಾಘವೇಂದ್ರ ಮಠದಲ್ಲಿ ಅಭಿನಂದಿಸಲಾಯಿತು. ಮೇ 28 ರಂದು ರಾಘವೇಂದ್ರ ಮಠದಲ್ಲಿ ಶ್ರೀಗಳ ಪಾದಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.