ADVERTISEMENT

ಉದ್ಯೋಗ ಖಾತರಿ ರಥಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 14:22 IST
Last Updated 15 ಅಕ್ಟೋಬರ್ 2024, 14:22 IST
ಹುಕ್ಕೇರಿ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ‘ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ‘ಅಭಿಯಾನಕ್ಕೆ ತಾ.ಪಂ.ಇಒ ಟಿ.ಆರ್.ಮಲ್ಲಾಡದ ಮಂಗಳವಾರ ಚಾಲನೆ ನೀಡಿದರು
ಹುಕ್ಕೇರಿ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ‘ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ‘ಅಭಿಯಾನಕ್ಕೆ ತಾ.ಪಂ.ಇಒ ಟಿ.ಆರ್.ಮಲ್ಲಾಡದ ಮಂಗಳವಾರ ಚಾಲನೆ ನೀಡಿದರು   

ಹುಕ್ಕೇರಿ: ಉದ್ಯೋಗ ಖಾತರಿ ಯೋಜನೆಯಡಿ  2025-26ನೇ ಸಾಲಿನ ಕ್ರಿಯಾ ಯೋಜನೆ ತಯಾರಿಸಲು ‘ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ‘ ಅಭಿಯಾನಕ್ಕೆ ತಾಲ್ಲೂಕು ಪಂಚಾಯ್ತಿ ಇಒ ಟಿ.ಆರ್. ಮಲ್ಲಾಡದ ಚಾಲನೆ ನೀಡಿದರು.

ಮಂಗಳವಾರ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ನರೇಗಾ ಯೋಜನೆಯಡಿಯ ‘ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ‘ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಬೆಳೆಗಳನ್ನು ಬೆಳಯಲು ಈ ಯೋಜನಯಡಿಯಲ್ಲಿ ಅವಕಾಶವಿದೆ. ಗ್ರಾಮ ಪಂಚಾಯ್ತಿಗಳಿಂದ ವೈಯಕ್ತಿಕ ಕಾಮಗಾರಿ ಕೈಕೊಳ್ಳಲು ಗ್ರಾಮೀಣ ಭಾಗದ ರೈತರಿಗೆ ಅವಕಾಶವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು‘ ಎಂದು ಸಲಹೆ ನೀಡಿದರು.

2025-26 ನೇ ಸಾಲಿನ ಕ್ರಿಯಾ ಯೋಜನೆ ತಯಾರಿಕೆಗೆ ರೈತರು ತಮಗೆ ಅವಶ್ಯಕ ಕಾಮಗಾರಿಗಳ ಬೇಡಿಕೆ ಸಲ್ಲಿಸಬೇಕು ಮತ್ತು ಗ್ರಾಮ ಸಭೆಗಳಲ್ಲಿ ಭಾಗವಹಿಸಲು ಸೂಚನೆ ನೀಡಿದರು.

ADVERTISEMENT

ಈ ಉದ್ಯೋಗ ವಾಹಿನಿ ರಥವು ತಾಲ್ಲೂಕಿನ 52 ಗ್ರಾಮ ಪಂಚಾಯ್ತಿಗಳಲ್ಲಿ ಸಂಚರಿಸುವ ಮೂಲಕ ಯೋಜನೆಯ ಮಾಹಿತಿ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತದೆ. ಗ್ರಾಮೀಣ ಭಾಗದ ಉದ್ಯೋಗ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಉದ್ಯೋಗ ನೀಡಲಾಗುವುದು. ಒಂದು ಕುಟುಂಬವು ಜೀವಿತಾವಧಿಯಲ್ಲಿ ಗರಿಷ್ಠ ₹ 5 ಲಕ್ಷದವರೆಗೆ ಲಾಭ ಪಡೆಯಬಹುದು. ಆದ್ದರಿಂದ ರೈತರು ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ ಬೇಡಿಕೆಯನ್ನು ತಮ್ಮ ಹತ್ತಿರದ ಗ್ರಾಮ ಪಂಚಾಯ್ತಿಯಲ್ಲಿ ಸಲ್ಲಿಸಬಹುದು. ದಿನ ಒಂದಕ್ಕೆ ₹ 349 ಕೂಲಿ ಇದೆ’ ಎಂದರು. 

ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಲಕ್ಷ್ಮೀನಾರಾಯಣ ಪಿ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ರಾಜು ಢಾಂಗೆ, ಐ.ಎನ್.ಪಾಟೀಲ, ಎನ್.ಎಸ್. ಕುಲಕರ್ಣಿ, ಕಿರಣ ಅಂಬೇಕರ, ಸಚೀನ ಮಾಳಗಿ, ರವೀಂದ್ರ ಕಂಕನವಾಡಿ, ವಿನಾಯಕ ನಾಯಿಕ, ಶಂಕರ ಶಿರಗುಪ್ಪಿ, ಮಹಾಂತೇಶ ಬಾದವನಮಠ, ಪ್ರೀತಿ ಜವಳಿ, ಎಸ್.ಎಸ್. ದುರ್ಗಾಯಿ, ಲಕ್ಷ್ಮೀ ಯಡ್ರಾವಿ, ಆಶಾರಾಣಿ ಪಾಟೀಲ, ಉಮಾ ಎಮ್ಮಿ, ಪ್ರೀತಿ ಪಾಟೀಲ, ಸಂಜು ಹುದ್ದಾರ, ಸುನೀತಾ ಹಂಚಿನಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.