ADVERTISEMENT

ಲಖನ್ ಜಾರಕಿಹೊಳಿ ಬೆಂಬಲ ಬೇಕಿಲ್ಲ: ಉಮೇಶ ಕತ್ತಿ

​ಪ್ರಜಾವಾಣಿ ವಾರ್ತೆ
Published 27 ಮೇ 2022, 16:09 IST
Last Updated 27 ಮೇ 2022, 16:09 IST
ಆಹಾರ ಸಚಿವ ಉಮೇಶ ಕತ್ತಿ
ಆಹಾರ ಸಚಿವ ಉಮೇಶ ಕತ್ತಿ   

ಅಥಣಿ (ಬೆಳಗಾವಿ ಜಿಲ್ಲೆ): ‘ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿರುವ ಲಖನ್ ಜಾರಕಿಹೊಳಿ ಬೆಂಬಲ ಬಿಜೆಪಿಗೆ ಆಗತ್ಯವಿಲ್ಲ’ ಎಂದು ಆಹಾರ ಸಚಿವ ಉಮೇಶ ಕತ್ತಿ ಹೇಳಿದರು.

ಇಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಬಿಜೆಪಿಗೆ ಯಾರ ಬೆಂಬಲವೂ ಬೇಡ. ಜಿಲ್ಲೆಯಲ್ಲಿ ನಾವೇ 13 ಮಂದಿ ಶಾಸಕರಿದ್ದೇವೆ. ವಿಧಾನಪರಿಷತ್‌ ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ. ಬೇರೆಯವರ ಬೆಂಬಲ ನಮಗೇಕೆ ಬೇಕು?’ ಎಂದು ಕೇಳಿದರು.

‘ಬೇಕಿದ್ದರೆ ಲಖನ್ ಪಕ್ಷದ ಪರವಾಗಿ ಪ್ರಚಾರಕ್ಕೆ ಬರಲಿ. ಬರುವವರಿಗೆ ಬೇಡ ಎನ್ನುವುದಿಲ್ಲ. ಲಖನ್ ಬೆಂಬಲವು ಬಿಜೆಪಿಗೆ ಯಾವುದೇ ಬದಲಾವಣೆ ತರುವುದಿಲ್ಲ. ಅವರು ನಮ್ಮ ಪಕ್ಷವನ್ನೇನೂ ಸೇರಿಲ್ಲ. ಹೀಗಾಗಿ, ಆ ಬಗ್ಗೆ ಹೆಚ್ಚು ಚರ್ಚಿಸುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.