ADVERTISEMENT

‘ವಂದೇ ಭಾರತ್‌’ ರೈಲು: ಬೆಳಗಾವಿ ಪ್ರಯಾಣಿಕರಿಗೆ ಬಸ್‌ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2023, 7:37 IST
Last Updated 4 ಜುಲೈ 2023, 7:37 IST
ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು
ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು    

ಹುಬ್ಬಳ್ಳಿ: ಬೆಂಗಳೂರು- ಧಾರವಾಡ ನಡುವೆ ಹೊಸದಾಗಿ ಆರಂಭವಾಗಿರುವ ‘ವಂದೇ ಭಾರತ್’ ರೈಲಿನ ಸಮಯಕ್ಕೆ ಹೊಂದಾಣಿಕೆ ಆಗುವಂತೆ ಹುಬ್ಬಳ್ಳಿ ರೈಲ್ವೆ ನಿಲ್ದಾಣ- ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ನಡುವೆ ವೋಲ್ವೋ ಬಸ್, ಹಾಗೂ ಧಾರವಾಡ ರೈಲು ನಿಲ್ದಾಣ- ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ನಡುವೆ ರಾಜಹಂಸ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಳಗಾವಿ ಹಾಗೂ ಸುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ ‘ವಂದೇ ಭಾರತ್’ ರೈಲಿನಲ್ಲಿ ಪ್ರಯಾಣ ಮಾಡಲು ಅನುಕೂಲ ಕಲ್ಪಿಸಲು ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಮಲ್ಟಿ ಆ್ಯಕ್ಸೆಲ್ ವೋಲ್ವೊ ಎ.ಸಿ ಬಸ್, ಧಾರವಾಡ ರೈಲು ನಿಲ್ದಾಣಕ್ಕೆ ರಾಜಹಂಸ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರಿನಿಂದ ಬೆಳಿಗ್ಗೆ 5.45ಕ್ಕೆ ಹೊರಡುವ ರೈಲು, ಹುಬ್ಬಳ್ಳಿಗೆ 11.30ಕ್ಕೆ, ಧಾರವಾಡಕ್ಕೆ 12.10ಕ್ಕೆ ತಲುಪಲಿದೆ. ಮಧ್ಯಾಹ್ನ 1.15ಕ್ಕೆ ಧಾರವಾಡದಿಂದ ಮರಳುವ ರೈಲು ಹುಬ್ಬಳ್ಳಿಗೆ 1.35ಕ್ಕೆ ತಲುಪಲಿದೆ. ರೈಲಿನ ಆಗಮನ- ನಿರ್ಗಮನ ಸಮಯಕ್ಕೆ ಅನುಗುಣವಾಗಿ ಈ ಬಸ್‌ಗಳ ವೇಳಾಪಟ್ಟಿ ನಿಗದಿಪಡಿಸಲಾಗಿದೆ.

ವೋಲ್ವೊ ಎಸಿ ಬಸ್‌: ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ  ಬೆಳಿಗ್ಗೆ 11ಕ್ಕೆ ಹೊರಡುವ ಬಸ್‌, ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಮಧ್ಯಾಹ್ನ 1.10ಕ್ಕೆ ತಲುಪಲಿದೆ. ಅದೇ ರೀತಿ ಹುಬ್ಬಳ್ಳಿ ರೈಲು ನಿಲ್ದಾಣದಿಂದ 11.30ಕ್ಕೆ ಹೊರಡುವ ಬಸ್‌, ಬೆಳಗಾವಿಗೆ 1.30ಕ್ಕೆ ತಲುಪಲಿದೆ. ಪ್ರಯಾಣ ದರ ₹180 ನಿಗದಿಪಡಿಸಲಾಗಿದೆ.

ADVERTISEMENT

ರಾಜಹಂಸ: ಧಾರವಾಡ ರೈಲು ನಿಲ್ದಾಣದಿಂದ ಮಧ್ಯಾಹ್ನ 12.25ಕ್ಕೆ ಹೊರಡವ ಬಸ್‌ ಬೆಳಗಾವಿ ನಿಲ್ದಾಣಕ್ಕೆ 1.55ಕ್ಕೆ ತಲುಪುತ್ತದೆ. ಇನ್ನೊಂದು ಬಸ್‌ ಬೆಳಗಾವಿ ಕೇಂದ್ರ ನಿಲ್ದಾಣದಿಂದ ಬೆಳಿಗ್ಗೆ 11.20ಕ್ಕೆ ಹೊರಟು ಧಾರವಾಡ ರೈಲು ನಿಲ್ದಾಣಕ್ಕೆ ಮಧ್ಯಾಹ್ನ 12.50ಕ್ಕೆ ಆಗಮಿಸಲಿದೆ. ಪ್ರಯಾಣ ದರ ₹135 ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.