ADVERTISEMENT

ವಾಹನ ದಟ್ಟನೆ; ಅಂಗಡಿ ಮಾಲೀಕರ ಸಭೆ 

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 16:19 IST
Last Updated 22 ನವೆಂಬರ್ 2024, 16:19 IST
ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ನಡೆದ ಬೀದಿ ವ್ಯಾಪಾರಸ್ಥರ ಸಭೆಯಲ್ಲಿ ಪಿ.ಐ ಎಚ್.ಡಿ.ಮುಲ್ಲಾ ಮಾತನಾಡಿದರು
ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ನಡೆದ ಬೀದಿ ವ್ಯಾಪಾರಸ್ಥರ ಸಭೆಯಲ್ಲಿ ಪಿ.ಐ ಎಚ್.ಡಿ.ಮುಲ್ಲಾ ಮಾತನಾಡಿದರು   

ಘಟಪ್ರಭಾ: ಕಬ್ಬಿನ ಹಂಗಾಮ ಆರಂಭವಾಗಿದ್ದು, ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ಗಳಿಂದಾಗಿ ರಸ್ತೆಗಳಲ್ಲಿ ವಾಹನಗಳ ಸಂಚಾರ ಸುಗಮವಾಗುವಂತೆ ಪ್ರಮುಖ ರಸ್ತೆಗಳಲ್ಲಿ ವೃತ್ತಗಳಲ್ಲಿನ ಬೀದಿ ಅಂಗಡಿ, ಪಾನ್ ಬೀಡಾ ಅಂಗಡಿ ಮಾಲೀಕರೊಂದಿಗೆ ಬುಧವಾರ ಸಂಜೆ ಇಲ್ಲಿಯ ಪಿಐ ಎಚ್.ಡಿ ಮುಲ್ಲಾ ಸಭೆ ನಡೆಸಿದರು.

ಇಲ್ಲಿಯ ಮೃತ್ಯುಂಜಯ ವೃತ್ತದ ಸುತ್ತು ಇರುವ ಅಂಗಡಿಗಳ ಮುಂದೆ ಬೇಕಾ ಬಿಟ್ಟಿ ವಾಹನಗಳ ನಿಲುಗಡೆಯಿಂದಾಗಿ ನಿತ್ಯ ವಾಹನಗಳ ದಟ್ಟನೆ ಹೆಚ್ಚಾಗುತ್ತಿದ್ದು, ಕಬ್ಬಿನ ಲಾರಿ, ಟ್ರ್ಯಾಕ್ಟರ್, ಇತರೆ ವಾಹನಗಳಿಗೂ ತೊಂದರೆಯಾಗುತ್ತಿದ್ದು, ಸಾರ್ವಜನಿಕರು ತಮ್ಮ ವಾಹನಗಳನ್ನು ನಿಗದಿತ ಸ್ಥಳಗಳಲ್ಲಿ ನಿಲುಗಡೆ ಮಾಡುವಂತೆ ಅಂಗಡಿ ಮಾಲೀಕರು ಸೂಚಿಸಬೇಕು ಎಂದರು.

ಸಾರ್ವಜನಿಕರೂ ತಮ್ಮ ವಾಹನಗಳನ್ನು ಸೂಕ್ತ ಸ್ಥಳಗಳಲ್ಲಿ ನಿಲ್ಲಿಸಿ, ಇತರೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟು ಅಪಘಾತಗಳಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.

ADVERTISEMENT

ಪಿ.ಎಸ್.ಐ ಎಸ್.ಆರ್.ಕಣವಿ, ಎಚ್.ಕೆ.ನರಳೆ, ಸಿಬ್ಬಂದಿ ವರ್ಗ, ಪುರಸಭೆ ಸಿಬ್ಬಂದಿ ಮಹಾಂತೇಶ ದೊಡಲಿಂಗಪ್ಪಗೋಳ, ನೂರಾರು ಜನ ಅಂಗಡಿ ಮಾಲೀಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.