ADVERTISEMENT

ವಿಶ್ವರಾಜ್ ಶುಗರ್ಸ್: ಕಬ್ಬು ನುರಿಕೆ ಆರಂಭ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 15:23 IST
Last Updated 25 ಅಕ್ಟೋಬರ್ 2024, 15:23 IST
ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ್ ಶುಗರ್ಸ್ ಪ್ರಸಕ್ತ ಸಾಲಿನ ಬಾಯ್ಲರ್ ಪ್ರದೀಪನ ಕಾರ್ಯಕ್ಕೆ ಪೃಥ್ವಿ ಕತ್ತಿ, ಪವನ್ ಕತ್ತಿ, ಸಂದೀಪ ಕತ್ತಿ ಚಾಲನೆ ನೀಡಿದರು
ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ್ ಶುಗರ್ಸ್ ಪ್ರಸಕ್ತ ಸಾಲಿನ ಬಾಯ್ಲರ್ ಪ್ರದೀಪನ ಕಾರ್ಯಕ್ಕೆ ಪೃಥ್ವಿ ಕತ್ತಿ, ಪವನ್ ಕತ್ತಿ, ಸಂದೀಪ ಕತ್ತಿ ಚಾಲನೆ ನೀಡಿದರು   

ಹುಕ್ಕೇರಿ: ತಾಲ್ಲೂಕಿನ ಬೆಲ್ಲದ ಬಾಗೇವಾಡಿ ವಿಶ್ವರಾಜ್ ಶುಗರ್ಸ್ ಇಂಡಸ್ಟ್ರೀಜ್ ಲಿ. ಪ್ರಸಕ್ತ ಸಾಲಿನ ಬಾಯ್ಲರ್ ಪ್ರದೀಪನ ಮತ್ತು ಕಬ್ಬು ನುರಿಕೆ ಕಾರ್ಯಾಚರಣೆ ಪ್ರಾರಂಭಿಸಿತು.

ಮುಖ್ಯ ಆಡಳಿತಾಧಿಕಾರಿ ಪೃಥ್ವಿ ಕತ್ತಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ14 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದ್ದು, ಸದಸ್ಯರು, ಕಬ್ಬು ಬೆಳೆಗಾರರು ಕಬ್ಬು ಪೂರೈಸಲು ವಿನಂತಿಸಿದರು.

ಕಬ್ಬಿನ ನುರಿಕೆ ಹೆಚ್ಚಾದಷ್ಟು ಉತ್ತಮ ದರ ಕೊಡಲು ಸಾಧ್ಯವೆಂದ ಅವರು, ತಾಲ್ಲೂಕಿನ 3 ಸಕ್ಕರೆ ಕಾರ್ಖಾನೆಗಳ ಅಭಿವೃದ್ಧಿಗೆ ರೈತರು, ಸದಸ್ಯರು ಕೈಜೋಡಿಸಲು ವಿನಂತಿಸಿದರು.

ADVERTISEMENT

ನಿರ್ದೇಶಕ ಪವನ್ ಕತ್ತಿ ಮಾತನಾಡಿ, ಗೋವಿನ ಜೋಳ (ಮೆಕ್ಕೆ ಜೋಳ) ಬಳಸಿ ಏಥೆನಾಲ್ ಉತ್ಪಾದಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ರೈತರು ಬೆಳೆದ ಗೋವಿನ ಜೋಳವನ್ನು ಕಾರ್ಖಾನೆಯೇ ಖರೀದಿ ಮಾಡಿ ಅನುಕೂಲ ಮಾಡಿಕೊಡಲಿದೆ ಎಂದರು.

ಮುಖಂಡರಾದ ದಿಲೀಪ ವಾಳಿಕಿಂಡಿ, ಸತ್ಯಪ್ಪ ಚಂದರಗಿ, ಸಂದೀಪ ಕತ್ತಿ, ಬಸವಣ್ಣಿ ಬಂಬಲವಾಡ, ಶಂಕರ ಚಂದರಗಿ, ಪರಸಪ್ಪ ಹನಮನ್ನವರ, ಬಾಹುಬಲಿ ಮುನ್ನೋಳಿ, ಅಶೋಕ ಬೆಲ್ಲದ, ಸಿದ್ರಾಮ ಮುಗಳಿ, ಆನಂದ ಲಕ್ಕುಂಡಿ, ಸಂಜೀವ ನಾಯಿಕ, ವಿಶ್ವನಾಥ ನಾಯಿಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.