ADVERTISEMENT

ವಾಂತಿ–ಭೇದಿ: ಶಾಲೆಗಳಿಗೆ ರಜೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 15:49 IST
Last Updated 18 ಜೂನ್ 2024, 15:49 IST

ಸವದತ್ತಿ: ‘ವಾಂತಿ– ಭೇದಿ ಪ್ರಕರಣ ಹೆಚ್ಚಾದ ಕಾರಣ ಪಟ್ಟಣದ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಂಗಳವಾರ ತುರ್ತು ರಜೆ ನೀಡಲಾಗಿದ್ದು, ಬುಧವಾರ (ಜೂನ್‌ 19) ಕೂಡ ರಜೆ ಮುಂದುವರಿಯಲಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ್‌ ತಿಳಿಸಿದ್ದಾರೆ.

‘ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ರಜೆ ಅಗತ್ಯವಿದೆ. ಈ ರಜಾ ದಿನಗಳ ಬದಲಾಗಿ ಶನಿವಾರ ಮತ್ತು ಭಾನುವಾರ ಹೆಚ್ಚುವರಿ ತರಗತಿ ನಡೆಸಿ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಗ್ರಾಮೀಣ ಭಾಗದ ಶಾಲೆಗಳಿಗೆ ರಜೆ ಅನ್ವಯಿಸುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಪುರಸಭೆಯಿಂದ ಪೂರೈಕೆಯಾದ ಅಶುದ್ಧ ನೀರು ಕುಡಿದು ಜೂನ್‌ 10ರಿಂದ ವಾಂತಿ– ಭೇದಿ ಶುರುವಾಗಿತ್ತು. ಈವರೆಗೆ 80ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾಲ್ಲೂಕು ಆಸ್ಪತ್ರೆಯಲ್ಲೇ 30 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಸಕ ವಿಶ್ವಾಸ ವೈದ್ಯ ಅವರು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ತುರ್ತು ಕ್ರಮಕ್ಕೆ ಸೂಚಿಸಿದರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.