ADVERTISEMENT

ಬಂಜರು ಭೂಮಿಯಲ್ಲಿ ಬಂಗಾರದ ಬೆಳೆ: ಡ್ರ್ಯಾಗನ್ ಫ್ರುಟ್‌ ಬೆಳೆದು ಅಧಿಕ ಲಾಭ ಕಂಡ ಲತಾ

ಪ್ರಜಾವಾಣಿ ವಿಶೇಷ
Published 8 ಡಿಸೆಂಬರ್ 2023, 6:20 IST
Last Updated 8 ಡಿಸೆಂಬರ್ 2023, 6:20 IST
ತಮ್ಮ ಜಮೀನಿನಲ್ಲಿ ಬೆಳೆದ ಡ್ರ್ಯಾಗನ್ ಪ್ರುಟ್ ತೋರಿಸುತ್ತಿರುವ ಲತಾ ಐಗಳಿ
ತಮ್ಮ ಜಮೀನಿನಲ್ಲಿ ಬೆಳೆದ ಡ್ರ್ಯಾಗನ್ ಪ್ರುಟ್ ತೋರಿಸುತ್ತಿರುವ ಲತಾ ಐಗಳಿ   

ಕಾಗವಾಡ: ಕೃಷಿಯಲ್ಲಿ ಲಾಭವಿಲ್ಲ ಎಂದು ಹೊಲ, ಗದ್ದೆ ಮಾರಿ ಪಟ್ಟಣ- ನಗರ ಪ್ರದೇಶ ಸೇರುವವರ ಮಧ್ಯೆ ರೈತ ಮಹಿಳೆಯೊಬ್ಬರು ಬರಡು ಭೂಮಿಯಲ್ಲಿ ಡ್ರ್ಯಾಗನ್ ಫ್ರುಟ್ ಬೆಳೆದು ಕೈತುಂಬಾ ಆದಾಯ ಪಡೆದುಕೊಂಡು ಮಾದರಿಯಾಗಿದ್ದಾರೆ.

ಕಾಗವಾಡ ಮತ ಕ್ಷೇತ್ರದ ಆಜೂರ ಗ್ರಾಮದ ಲತಾ ರಾವಸಾಬ ಐಗಳಿ ಕೃಷಿಯಲ್ಲಿ ಸಾಧನೆ ಮಾಡಿದವರು. ತಮ್ಮ ನಾಲ್ಕು ಎಕರೆ ಪ್ರದೇಶದಲ್ಲಿ ಡ್ರ್ಯಾಗನ್ ಫ್ರುಟ್ ಬೆಳೆದು ವರ್ಷಕ್ಕೆ 12ರಿಂದ 16ಲಕ್ಷ ಆದಾಯವನ್ನು ಪಡೆದುಕೊಂಡು ಕೃಷಿಯಲ್ಲಿ ಲಾಭದಾಯಕ ಬೆಳೆ ಬೆಳೆಯುತ್ತಿದ್ದಾರೆ.

ಒಟ್ಟು ನಾಲ್ಕು ಎಕರೆಯಲ್ಲಿ 6ಸಾವಿರ ಸಸಿಗಳನ್ನು ನಾಟಿ ಮಾಡಿ ಕೈತುಂಬಾ ಆದಾಯ ಪಡೆಯುತ್ತಿದ್ದಾರೆ. ಫಸಲನ್ನು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ, ಕೊಲ್ಲಾಪುರ, ಮತ್ತು ಹೈದರಾಬಾದ್, ವಿಜಯಪೂರ, ಬೆಂಗಳೂರು, ಮಂಗಳೂರು, ನಗರಗಳಿಗೆ ಸರಬರಾಜು ಮಾಡುತ್ತಾರೆ.

ADVERTISEMENT

ಕೆಜಿಗೆ ₹80 ರಿಂದ ₹200ರ ವರಗೆ ಮಾರಾಟ ವಾಗುತ್ತದೆ. ಎಕರೆಗೆ ₹6 ಲಕ್ಷದಿಂದ ₹8 ಲಕ್ಷ ಆದಾಯ ಬರುತ್ತದೆ. ಇದಕ್ಕೆ ರೋಗಬಾಧೆ ಕಡಿಮೆ, ನೀರಿನ ಪ್ರಮಾಣವು ಕಡಿಮೆ ತಗಲುವುದರಿಂದ ಕೀಟನಾಶಕಗಳ ನಾಶಕ ಬಳಕೆ ಇಲ್ಲದಿರುವದರಿಂದ ಖರ್ಚು ಕಡಿಮೆಯಾಗಿ ಆದಾಯ ಲಾಭದಾಯಕವಾಗಿದೆ, ತಮ್ಮ ಪತಿ ರಾವಸಾಬ ಐಗಳಿ ಸಾಹಾಯದಿಂದ ಬೆಳೆಯನ್ನು ಬೆಳೆದು ನಾವು ಖುಷಿಯಾಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಲತಾ ಐಗಳಿ.

ಈ ಬೆಳೆಯಲ್ಲಿ ಖರ್ಚು ಕಡಿಮೆ ಇರುವುದರ ಜೊತೆಗೆ ನಾವು ಸಾವಯುವ ಕೃಷಿ ಪದ್ಧತಿ ಅಳವಡಿಸಿಕೊಂಡು ತಮ್ಮ ಹೈನುಗಾರಿಕೆಯಿಂದ ಬರುವ ಸಾವಯುವ ಗೊಬ್ಬರ, 40 ದಿನಗಳ ಕಾಲ ಅದು ಎರೆ ಹುಳಗಳು ತಯಾರಾಗುವರೆಗೆ ಕಾದು ಅದನ್ನು ಬಳಸಿ ಈ ಡ್ರ್ಯಾಗನ್ ಫ್ರುಟ್ ಬೆಳೆಯುತ್ತಿದ್ದೆವೆ.

ಪಕ್ಕದ ರೈತರಿಗೆ ಅನುಕೂಲವಾಗಲಿ ಎಂದು ಈ ದಂಪತಿ ಉಚಿತವಾಗಿ ಡ್ರ್ಯಾಗನ್ ಫ್ರುಟ್ ಸಸಿಗಳನ್ನು ವಿತರಣೆ ಮಾಡಿ ಉದಾರತೆ ಮೆರೆಯುತ್ತಿದ್ದಾರೆ.

ವಿವಿಧ ತಳಿ; ರೋಗಕ್ಕೆ ಮದ್ದು

ಡ್ರ್ಯಾಗನ್‌ ಫ್ರುಟ್‌ನ ಹಲವು ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಸದ್ಯ ನಾವು ನಮ್ಮ ತೋಟದಲ್ಲಿ ಐದು ತೆರನಾದ ಹಣ್ಣುಗಳನ್ನು ಬೆಳೆಯುತ್ತಿದ್ದೇವೆ. ರೆಡ್ ವೈಟ್‌ ಯಲ್ಲೋ ವೈಟ್ ಜಂಬೂ ರೆಡ್ ಸಿ ವೈರಟಿ ರೆಗ್ಯುಲರ್ ರೆಡ್ ತರಹದ ಹಣ್ಣು ಬೆಳೆಯುತ್ತೇವೆ. ತಂತ್ರಜ್ಞಾನ ಬಳಸಿಕೊಂಡು ನಮ್ಮ ಜಮೀನುಗಳಿಗೆ ಹೊಂದುವಂತಹ ಹಲವು ಬೆಳೆಗಳನ್ನು ಬೆಳೆಯಬಹುದು. ಸಾಂಪ್ರದಾಯಿಕ ಕೃಷಿಯನ್ನು ಬಿಟ್ಟು ರೈತರು ಬೇರೆ ಬೆಳೆಗಳ ಕಡೆ ಗಮನವನ್ನು ಕೊಡಬೇಕು ಎಂದು ರೈತರಿಗೆ ಸಲಹೆ ನೀಡುತ್ತಾರೆ ಲತಾ ಐಗಳಿ. ಮಧುಮೇಹ ಅಧಿಕ ರಕ್ತದೊತ್ತಡ ಕ್ಯಾನ್ಸರ್ ಬಿಳಿ ರಕ್ತ ಕಣಗಳು ಹೆಚ್ಚಿಸುವುದು ಹೀಗೆ ಹಲವು ರೋಗಗಳಿಗೆ ಈ ಹಣ್ಣು ಪ್ರಯೋಜನವಾಗಲಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ ಎಂದು ಹೇಳುತ್ತಾರೆ ಅವರು.

ಬರಡು ಭೂಮಿಯಲ್ಲಿ ಸ್ವಲ್ಪ ಪ್ರಮಾಣದ ನೀರಿನಲ್ಲಿ ಬೆಳೆಯಬಹುದಾದ ಡ್ರ್ಯಾಗನ್‌ ಫ್ರುಟ್‌ಅನ್ನು ಬೆಳೆಯಲು ಪ್ರಾರಂಭಿಸಿ ಸದ್ಯ ಲಕ್ಷಾಂತರ ರೂಪಾಯಿ ಆದಾಯವನ್ನು ಪಡೆದುಕೊಳುತ್ತಿರುವ ಬಗ್ಗೆ ಖುಷಿ ಇದೆ
–ಲತಾ ಐಗಳಿ ರೈತ ಮಹಿಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.