ಹುಕ್ಕೇರಿ: ‘ಸ್ವ-ಸಹಾಯ ಸಂಘಗಳು ಮಹಿಳೆಯರ ಆರ್ಥಿಕ ಪುನಶ್ಚೇತನಕ್ಕೆ ಸೀಮಿತವಾಗಿರದೆ, ಕುಟುಂಬಗಳ ಸರ್ವಾಂಗೀಣ ಅಭಿವೃದ್ಧಿ ಪೂರಕವಾಗುತ್ತಿರುವುದು ಸಂತೋಷದ ಸಂಗತಿ’ ಎಂದು ಯರಗಟ್ಟಿ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಕಿರಣ ಚೌಗಲಾ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಯರಗಟ್ಟಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಮತ್ತು ಮಹಿಳಾ ಕಲ್ಯಾಣ ಸಂಸ್ಥೆ ಅಡಿ ‘ಮಹಿಳಾ ಸಬಲೀಕರಣ ಕುರಿತು ಸ್ವಸಹಾಯ ಗುಂಪುಗಳ ಸದಸ್ಯರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೌಟುಂಬಿಕ ಸಮಸ್ಯೆಗಳ ನಿವಾರಣೆಗಿರುವ ಕೌಟುಂಬಿಕ ಸಲಹಾ ಕೇಂದ್ರ, ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ, ಉಜ್ವಲಾ ಮಹಿಳೆಯರ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರದ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ಸೇವಾ ಪ್ರತಿನಿಧಿ ರಮೇಶ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ಸೇವಾ ಪ್ರತಿನಿಧಿಗಳಾದ ಸುಜಾತಾ ವಂದೂರೆ, ಶ್ರುತಿ ಗವನಾಳಿ, ಮಂಗಲ ಕುಂಬಾರ, ಸವಿತಾ ಚವ್ಹಾಣ, ಸುವಿಧಾ ಸಹಾಯಕರಾದ ಲಕ್ಷ್ಮೀ ಬಟವಾಲ, ಉಪಾಧ್ಯಕ್ಷೆ ರೂಪಾ ಬಸ್ತವಾಡ, ಹಾಗೂ ರಮೇಶ, ಸಂಗಾತಿ ಕೌಟುಂಬಿಕ ಸಲಹಾ ಕೇಂದ್ರದ ಸಲಹಾಗಾರ್ತಿ ಸುಗಂಧಾ ಅಲ್ಲೋಟ್ಟಿ ಇದ್ದರು.
ನಮ್ಮೂರ ಬಾನುಲಿ ರೇಡಿಯೊ ಕೇಂದ್ರದ ಅಕ್ಷಯ ಘೋರ್ಪಡೆ ರೇಡಿಯೊ ಕೇಂದ್ರದಲ್ಲಿ ಸಮುದಾಯದ ಸಹಭಾಗಿತ್ವ ಬಗ್ಗೆ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.