ADVERTISEMENT

ತಂತ್ರಾಂಶದ ಮೇಲೆ ಜಗತ್ತು ಅವಲಂಬನೆ: ರವೀಂದ್ರನಾಥ ಕದಮ್

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2023, 14:24 IST
Last Updated 12 ನವೆಂಬರ್ 2023, 14:24 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಳಗಾವಿ: ‘ಜಗತ್ತು ಇಂದು ತಂತ್ರಾಂಶದ ಮೇಲೆ ನಿಂತಿದೆ. ಪ್ರತಿ ಆಗುಹೋಗುಗಳು ತಂತ್ರಾಂಶವನ್ನೇ ಅವಲಂಬಿಸಿವೆ. ಇಂದು ಬಿಸಿಎ ವಿದ್ಯಾರ್ಥಿಗಳಿಗೆ ವಿಪುಲವಾದ ಉದ್ಯೋಗವಕಾಶಗಳಿವೆ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ  ಮೌಲ್ಯಮಾಪನ ಕುಲಸಚಿವ ರವೀಂದ್ರನಾಥ ಕದಮ್  ಹೇಳಿದರು.

ಇಲ್ಲಿನ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಕಂಪ್ಯೂಟರ್ ಅಪ್ಲಿಕೇಷನ್ಸ್‌  ವಿಭಾಗ ಹಮ್ಮಿಕೊಂಡಿದ್ದ ಓರಿಯಂಟೇಷನ್ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದ ಅವರು, ‘ಇಂದು ಪ್ರತಿ ಕ್ಷೇತ್ರವೂ ತಂತ್ರಾಂಶಗಳ ಮೊರೆ ಹೋಗುತ್ತಿದೆ. ಪ್ರಸ್ತುತ ಬೇಡಿಕೆಗೆ ತಕ್ಕಂತೆ ವಿದ್ಯಾರ್ಥಿಗಳು ಸಿದ್ಧವಾಗಬೇಕು’ ಎಂದರು.

ADVERTISEMENT

ಸಂಪನ್ಮೂಲ ವ್ಯಕ್ತಿ ಡಾ.ಪರಶುರಾಮ ಬನ್ನಿಗಿಡದ ಉಪನ್ಯಾಸ ನೀಡಿದರು. ಪ್ರಾಚಾರ್ಯ ಎಸ್ .ಎಸ್.ತೇರದಾಳ ಅಧ್ಯಕ್ಷತೆ ವಹಿಸಿದ್ದರು.

ಪ್ರವೀಣ್ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಜ್ಯೋತಿ ಬಿರಾದಾರ ಸ್ವಾಗತಿಸಿದರು.  ಸ್ವಾತಿ ಕನಟ್ಟಿ ನಿರೂಪಿಸಿದರು. ಅರ್ಚನಾ  ಮಗದುಮ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.