ADVERTISEMENT

ವಚನ ಸಾಹಿತ್ಯ ಪಾಲಿಸಿದರೆ ಜಗತ್ತಿನಲ್ಲಿ ಶಾಂತಿ: ಶ್ರೀ

​ಪ್ರಜಾವಾಣಿ ವಾರ್ತೆ
Published 10 ಮೇ 2024, 15:06 IST
Last Updated 10 ಮೇ 2024, 15:06 IST
ಹುಕ್ಕೇರಿ ಅಡವಿ ಸಿದ್ಧೇಶ್ವರ ಮಠದ ಬಳಿ ಚಂದ್ರಶೇಖರ ಮತ್ತು ಶಿವಬಸವ ಸ್ವಾಮೀಜಿಗಳು ಬಸವಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು
ಹುಕ್ಕೇರಿ ಅಡವಿ ಸಿದ್ಧೇಶ್ವರ ಮಠದ ಬಳಿ ಚಂದ್ರಶೇಖರ ಮತ್ತು ಶಿವಬಸವ ಸ್ವಾಮೀಜಿಗಳು ಬಸವಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು    

ಹುಕ್ಕೇರಿ: ಸಮಾನತೆಯ ಸಂದೇಶ, ಕಾಯಕ ತತ್ವ ನೀಡಿದ ಶ್ರೇಯಸ್ಸು 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರಿಗೆ ಸಲ್ಲುತ್ತದೆ. ಅವರ ವಚನ ಸಾಹಿತ್ಯ ಪಾಲಿಸಿದಲ್ಲಿ ಇಡೀ ಜಗತ್ತೆ ಶಾಂತಿಯುತವಾಗಿ ಬಾಳಲು ಸಾಧ್ಯ ಎಂದು ಹಿರೇಮಠದ ಚಂದ್ರಶೇಖರ್ ಸ್ವಾಮೀಜಿ ಹೇಳಿದರು.

ಪಟ್ಟಣದ ಅಡವಿ ಸಿದ್ಧೇಶ್ವರ ಮಠದ ಎದುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಶರಣರ ಜೀವನವನ್ನು ತಿಳಿದುಕೊಂಡರೆ, ಅವರೆಲ್ಲ ನುಡಿದಂತೆ ನಡೆದವರು ಎಂದರು.

ADVERTISEMENT

ತಾಲ್ಲೂಕು ಜಾನಪದ ಪರಿಷತ್ ಘಟಕದ ಅಧ್ಯಕ್ಷ ಸುಭಾಸ ನಾಯಿಕ ಮಾತನಾಡಿದರು.

ಶೃಂಗಾರಗೊಂಡ ನೂರಾರು ಎತ್ತುಗಳು, ಹೋರಿಗಳ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸುವಾಗ ಭಕ್ತರು ಎತ್ತಿನ ಕಾಲುಗಳಿಗೆ ತುಂಬಿದ ನೀರು ಸುರಿದು, ಪೂಜೆಗೈದರು.

ಸಮಾಜದ ಮುಖಂಡರಾದ ವಿಜಯ ರವದಿ, ಅಣ್ಣಾಗೌಡ ಪಾಟೀಲ್, ಸುರೇಶ ಜಿನರಾಳಿ, ಚಂದು ಗಂಗನ್ನವರ, ಗಿರೀಶ ಕುಲಕರ್ಣಿ, ಕಾಡಪ್ಪ ಪಾಟೀಲ, ಪರಗೌಡ ಪಾಟೀಲ್, ಶಿವಾನಂದ ನಾಯಿಕ, ಶಂಕರ ಅಲಗರಾವುತ್, ರಾಮಗೌಡ ಪಾಟೀಲ, ನಿಂಗೌಡ ಪಾಟೀಲ್, ಭರಮಗೌಡ ಪಾಟೀಲ್, ಸಿಡಿಪಿಒ ಎಚ್.ಹೊಳೆಪ್ಪ, ಪಿಎಸ್ಐ ಐ.ಎಂ.ದುಂಡಸಿ ಇದ್ದರು.

ಹುಕ್ಕೇರಿಯಲ್ಲಿ ಬಸವ ಜಯಂತಿ ಅಂಗವಾಗಿ ಅಲಂಕೃತಗೊಂಡ ಎತ್ತುಗಳು ಮೆರವಣಿಗೆಯಲ್ಲಿ ಶುಕ್ರವಾರ ಪಾಲ್ಗೊಂಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.