ಕಡು ಚಳಿಯಲ್ಲೂ ಕಾಲ್ನಡಿಗೆ ಮೂಲಕ ಯಲ್ಲಮ್ಮನ ಸನ್ನಿಧಿಯತ್ತ ಹೆಜ್ಜೆ ಹಾಕುತ್ತಿರುವ ಭಕ್ತರು. ನಸುಕಿನ ಜಾವದಲ್ಲೂ ಕಣ್ಮನ ಸೆಳೆಯುತ್ತಿರುವ ಚಕ್ಕಡಿಗಳ ಸಾಲು. ತಲೆ ಮೇಲೆ ದೇವಿ ಜಗಹೊತ್ತು ಕುಣಿಯುತ್ತಿರುವ ಜೋಗತಿಯರು. ಈ ದೃಶ್ಯಗಳು ಕಂಡುಬಂದಿದ್ದು ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡದ ಜಾತ್ರೆಯಲ್ಲಿ. ಪೌರಾಣಿಕ, ಐತಿಹಾಸಿಕ ಹಾಗೂ ಧಾರ್ಮಿಕವಾಗಿ ಸಂಗಮದಂತಿರುವ ಈ ಕ್ಷೇತ್ರದಲ್ಲಿ ಗುರುವಾರ ಭಕ್ತಿಯ ಹೊಳೆಯೇ ಹರಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.