ADVERTISEMENT

ಅನಂತಮೂರ್ತಿ ವ್ಯಕ್ತಿತ್ವದ ನಾಲ್ಕನೇ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2017, 20:03 IST
Last Updated 25 ಫೆಬ್ರುವರಿ 2017, 20:03 IST
ಅನಂತಮೂರ್ತಿ ವ್ಯಕ್ತಿತ್ವದ ನಾಲ್ಕನೇ ಕೃತಿ ಬಿಡುಗಡೆ
ಅನಂತಮೂರ್ತಿ ವ್ಯಕ್ತಿತ್ವದ ನಾಲ್ಕನೇ ಕೃತಿ ಬಿಡುಗಡೆ   

ಬೆಂಗಳೂರು: ಸಾಹಿತಿ ಯು.ಆರ್‌.ಅನಂತಮೂರ್ತಿ  ಅವರ ಕುರಿತು ‘ಸೂರ್ಯನ ಕುದುರೆ’ ಪ್ರಕಾಶನ ಪ್ರಕಟಿಸಿರುವ ‘ಊರು ಕಂಡಂತೆ ಅನಂತ... ಮೂರ್ತಿ’ ಪುಸ್ತಕವನ್ನು ವಿಮರ್ಶಕ ಸಿ.ಎನ್.ರಾಮಚಂದ್ರನ್ ಅವರು ಶನಿವಾರ ನಗರದಲ್ಲಿ ಬಿಡುಗಡೆ ಮಾಡಿದರು.

ಊರಿನವರು ಹಾಗೂ ಒಡನಾಡಿಗಳು ಕಂಡಂತೆ ಅನಂತಮೂರ್ತಿ ಅವರು ಹೇಗಿದ್ದರು ಎಂಬ  ಲೇಖನಗಳು  ಪುಸ್ತಕದಲ್ಲಿವೆ. ಒಟ್ಟು 416 ಪುಟಗಳ ಈ ಪುಸ್ತಕದ ಬೆಲೆ ₹300. 71 ಲೇಖಕರ 74 ಲೇಖನಗಳು ಕೃತಿಯಲ್ಲಿವೆ.

ಸಿ.ಎನ್.ರಾಮಚಂದ್ರನ್ ಮಾತನಾಡಿ, ‘ಅನಂತಮೂರ್ತಿ ಅವರ  ವ್ಯಕ್ತಿತ್ವದ ಬಗ್ಗೆ ಬಂದಿರುವ ನಾಲ್ಕನೇ ಕೃತಿ ಇದು. ಈ ಹಿಂದಿನ ಪುಸ್ತಕಗಳಲ್ಲಿ ಕಾಣಸಿಗದ ಅನೇಕ ವಿಚಾರಗಳು ಈ ಪುಸ್ತಕದಲ್ಲಿವೆ’ ಎಂದರು.

‘ಜಾತಿಯನ್ನು ದೂಷಿಸುತ್ತಿದ್ದ ಅನಂತಮೂರ್ತಿ ಅವರು ಕೊನೆ ಕ್ಷಣದಲ್ಲಿ ಬ್ರಾಹ್ಮಣ ಆಚಾರ ವಿಚಾರಕ್ಕೆ ಸನಿಹವಾಗಿದ್ದರು ಎಂದು ಅವರ ಮಗ ಪುಸ್ತಕದಲ್ಲಿ ಹೇಳಿದ್ದಾರೆ.

ಆಪ್ತ ಸಂಬಂಧವನ್ನು ದೂರವಿಟ್ಟು ಲೇಖಕರು ಅತ್ಯಂತ ವಸ್ತುನಿಷ್ಠವಾಗಿ ಬರೆದಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ’ ಎಂದು ಅವರು ಹೇಳಿದರು.

‘ತುಂಗಾ ಮೂಲ ಉಳಿಸಿ ಹೋರಾಟದಲ್ಲಿ ಸಕ್ರಿಯರಾಗಿದ್ದ ಅವರು ಸಾಮಾನ್ಯ ಜನರೂ ಅತ್ಯಂತ ಉತ್ಸಾಹದಿಂದ ಭಾಗವಹಿಸುವಂತೆ ಮಾಡಿದ್ದರು. ಈ ಹೋರಾಟದ ಕುರಿತ  ಸಂಪೂರ್ಣ ಮಾಹಿತಿ ಪುಸ್ತಕದಲ್ಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.