ಬೆಂಗಳೂರು: ‘ಶ್ರೀರಾಮಚಾರಣ ಮಹಾಕಾವ್ಯ ಪ್ರಾಚೀನ ಕಾವ್ಯದ ಜತೆ ಆಧುನಿಕ ಸಂವೇದನೆ ಯಾವ ರೀತಿ ಅನುಸಂಧಾನ ಮಾಡಿಕೊಳ್ಳಬಹುದು ಎಂಬುದಕ್ಕೆ ಉತ್ತಮ ಉದಾಹರಣೆ’ ಎಂದು ವಿಮರ್ಶಕ ಸಿ.ಎನ್.ರಾಮಚಂದ್ರನ್ ಅಭಿಪ್ರಾಯಪಟ್ಟರು.
ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರ ‘ಶ್ರೀರಾಮಚಾರಣ’ ಮಹಾಕಾವ್ಯ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಪ್ರಾಚೀನ ಕಾವ್ಯಗಳ ಕೆಲವೊಂದು ಅಂಶಗಳನ್ನು ಈಗಿನ ಕಾಲದ ಪ್ರಜ್ಞೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ವಾಲ್ಮೀಕಿ ರಾಮಾಯಣ ಓದುವಾಗ ಆಧುನಿಕ ಮನಸ್ಸು ಅನೇಕ ತೊಡಕುಗಳನ್ನು ಎದುರಿಸುತ್ತದೆ. ಕವಿಯು ವಾಲ್ಮೀಕಿ ಶಾಪ, ಅಹಲ್ಯಾ ವೃತ್ತಾಂತ, ಲಂಕಾದಹನ ಮುಂತಾದ ಕಗ್ಗಂಟು
ಗಳನ್ನು ಕೈಬಿಟ್ಟು ಇಂದಿನ ಸಮಾಜ ಒಪ್ಪುವಂತೆ ಕಾವ್ಯವನ್ನು ಕಟ್ಟಿಕೊಟ್ಟಿದ್ದಾರೆ. ಸೀತಾ ಅಗ್ನಿಪ್ರವೇಶ ಪ್ರಸಂಗವನ್ನು ಬಿಡಬಹುದಿತ್ತು’ ಎಂದು ಅವರು ಹೇಳಿದರು.
ಕವಿ ಎಚ್.ಎಸ್. ವೆಂಕಟೇಶಮೂರ್ತಿ ಮಾತನಾಡಿ, ‘ಶ್ರೀರಾಮನನ್ನು ಇವತ್ತಿನ ಕಾಲಕ್ಕೆ ತಕ್ಕಂತೆ ಕಟ್ಟಿಕೊಡಬೇಕಾದ ಅಗತ್ಯವಿದೆ. ಇಲ್ಲದಿ
ದ್ದರೆ ರಾಜಕಾರಣಿಗಳು ರಾಮನನ್ನು ಮನಬಂದಂತೆ ಚಿತ್ರಿಸುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.
ವಿರೋಧಪಕ್ಷಗಳ ದಮನಕ್ಕೂ ರಾಮನನ್ನು ದುರ್ಬಳಕೆ ಮಾಡಿಕೊಂಡರು’ ಎಂದು ಹೇಳಿದರು.
ನಿಘಂಟುತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಮಾತನಾಡಿ, ‘ವಲ್ಮೀಕ ಎಂದರೆ ಹುತ್ತ ಎಂದು ಅರ್ಥೈಸಲಾಗುತ್ತಿದೆ. ಸಂಸ್ಕೃತದಲ್ಲಿ ವಲ್ಮೀಕ ಸಾತವೋ ಮೇಘಃ ಎಂದರೆ ಬಿಸಿಲು ಬಿದ್ದ ಮೋಡ ಎಂಬ ಅರ್ಥ ಇದೆ’ ಎಂದರು.
ಲೇಖಕ ಶ್ರೀಕಾಂತ ಉಡುಪ ಅವರು ಶ್ರೀರಾಮಚಾರಣ ಮಹಾಕಾವ್ಯದ ಪರಿಚಯ ಮಾಡಿದರು. ಗರ್ತಿಕೆರೆ ರಾಘಣ್ಣ ಅವರು ಮಹಾಕಾವ್ಯದ ಕೆಲವು ಪದ್ಯಗಳನ್ನು ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.