ADVERTISEMENT

ಇಂದಿನಿಂದ ‘ಜ್ಞಾನದೇಗುಲ’ ಶೈಕ್ಷಣಿಕ ಮೇಳ

​ಪ್ರಜಾವಾಣಿ ವಾರ್ತೆ
Published 25 ಮೇ 2018, 19:42 IST
Last Updated 25 ಮೇ 2018, 19:42 IST

ಬೆಂಗಳೂರು: ಭವಿಷ್ಯದ ಶಿಕ್ಷಣದ ಕುರಿತು ಮಾರ್ಗದರ್ಶನ ನೀಡುವ ಶೈಕ್ಷಣಿಕ ಮೇಳ ‘ಜ್ಞಾನದೇಗುಲ’ ಇದೇ 26ರಿಂದ ಪ್ರಾರಂಭವಾಗುತ್ತಿದೆ.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ದಿನಪತ್ರಿಕೆಗಳ ಸಹಯೋಗದಲ್ಲಿ ನಡೆಯುವ ಈ ಮೇಳದ 10ನೇ ಆವೃತ್ತಿಗೆ ದಿನಗಣನೆ ಪ್ರಾರಂಭವಾಗಿದ್ದು, ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಗಳು ಒಂದೇ ವೇದಿಕೆಯಲ್ಲಿ ಲಭ್ಯವಿರುತ್ತವೆ.

ಇದೇ 26 ಮತ್ತು 27ರಂದು ಬೆಂಗಳೂರಿನ ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ ಮೈದಾನದಲ್ಲಿ ಮೇಳ ನಡೆಯಲಿದೆ. ಇದರಲ್ಲಿ ರಾಜ್ಯದ ಹೆಸರಾಂತ ಮತ್ತು ಶೈಕ್ಷಣಿಕ ರಂಗದಲ್ಲಿ ಗುಣಮಟ್ಟದ ಸಾಧನೆ ಮಾಡಿರುವ ಶಿಕ್ಷಣ ಸಂಸ್ಥೆಗಳು ಭಾಗವಹಿಸಲಿವೆ.

ADVERTISEMENT

ಹೊಸ ಕೋರ್ಸ್‌ಗಳು, ಭವಿಷ್ಯದ ವೃತ್ತಿ ಬದುಕಿಗೆ ಪೂರಕವಾದ ಕೋರ್ಸ್‌ಗಳ ಮಾಹಿತಿ ಸಿಗಲಿದೆ. ಜತೆಗೆ ಶಿಕ್ಷಣ ತಜ್ಞರೊಂದಿಗೆ ಸಂವಾದ ಮತ್ತು ಅವರಿಂದ ಸಲಹೆಗಳನ್ನು ಪಡೆಯಲು ಅವಕಾಶವಿದೆ. ಸುಲಭದಲ್ಲಿ ಶೈಕ್ಷಣಿಕ ಸಾಲ ಪಡೆಯುವುದನ್ನು ತಿಳಿಯಬಹುದು. ಮೇಳಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಭಾಗವಹಿಸುವ ಶಿಕ್ಷಣ ಸಂಸ್ಥೆಗಳು: ಸಿಎಂಆರ್ ವಿಶ್ವವಿದ್ಯಾಲಯ, ಗೀತಮ್‌ ವಿಶ್ವವಿದ್ಯಾಲಯ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ರೇವಾ ವಿಶ್ವವಿದ್ಯಾಲಯ, ದಯಾನಂದ ಸಾಗರ ವಿಶ್ವವಿದ್ಯಾಲಯ, ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯ, ಅಮಿಟಿ ಶಿಕ್ಷಣ ಸಂಸ್ಥೆ, ಆಚಾರ್ಯ ಶಿಕ್ಷಣ ಸಂಸ್ಥೆ, ಕೆಂಬ್ರಿಜ್‌ ತಾಂತ್ರಿಕ ಶಿಕ್ಷಣ ಸಂಸ್ಥೆ, ಎಂ.ಎಸ್‌.ಎಂಜಿನಿಯರಿಂಗ್‌ ಕಾಲೇಜು, ಎಚ್‌ಕೆಬಿಕೆ ಎಂಜಿನಿಯರಿಂಗ್‌ ಕಾಲೇಜು, ಜೆಜಿಐ ಶಿಕ್ಷಣ ಸಂಸ್ಥೆಗಳು,  ದಿಕ್ಷಾ ಶಿಕ್ಷಣ ಸಂಸ್ಥೆ, ಆದಿಚುಂಚನಗಿರಿ ಎಂಜಿನಿಯರಿಂಗ್ ಕಾಲೇಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.