ಬೆಂಗಳೂರು: ಮಳೆ ಗಾಳಿಯ ಪರಿಣಾಮ ಹೆಸರಘಟ್ಟ ಹೋಬಳಿಯ ಹುರುಳಿ ಚಿಕ್ಕನಹಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿ ಬೃಹತ್ ಆಲದ ಮರವೊಂದು ರಸ್ತೆಯ ಮೇಲೆ ಬಿದ್ದಿದ್ದರಿಂದ ಸುಮಾರು ಎರಡು ತಾಸು ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
‘ಮರ ಬೀಳುವ ವೇಳೆಗೆ ಸರಿಯಾಗಿ ಮಾರ್ಕೆಟ್‍ನಿಂದ ಹೆಸರಘಟ್ಟಕ್ಕೆ ಹೋಗುವ ಬಿಎಂಟಿಸಿ ಬಸ್ ಅಲ್ಲಿಗೆ ಬಂದಿತು. ಆದರೆ, ಮರ ರಸ್ತೆಯ ಕಡೆಗೆ ವಾಲುತ್ತಿರುವುದನ್ನು ಗಮನಿಸಿದ ಚಾಲಕ ಮೊದಲೇ ಬಸ್ಸನ್ನು ನಿಲ್ಲಿಸಿದ. ಕೂದಲೆಳೆಯಿಂದ ಭಾರಿ ಅನಾಹುತ ತಪ್ಪಿತು’ ಎಂದು ಪ್ರತ್ಯಕ್ಷದರ್ಶಿ ಕನ್ನಮ್ಮ ಹೇಳಿದರು.
ಆ ಬಳಿಕ ಗ್ರಾಮಸ್ಥರು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.