ಬೆಂಗಳೂರು: ‘ಋಷಿಋಣ, ದೇವಋಣ, ಪಿತೃಋಣ, ಪ್ರಕೃತಿ ಋಣಗಳನ್ನು ತೀರಿಸಲಾಗದು. ಅವುಗಳನ್ನು ನಮ್ಮ ಸರ್ವತೋಮುಖ ಅಭಿವೃದ್ಧಿಗೆ ಬಳಸಿಕೊಳ್ಳಬೇಕು’ ಎಂದು ಶೇಷಾದ್ರಿಪುರ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಡಾ. ವೂಡೆ ಪಿ. ಕೃಷ್ಣ ಹೇಳಿದರು.
ಪೀಣ್ಯದಾಸರಹಳ್ಳಿಯ ಸಮೀಪ ಹಾವನೂರು ಬಡಾವಣೆಯ ಸೌಂದರ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 2018-19ರ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಿನಿಮಾ, ಸೆಲ್‌ಫೋನ್, ಕಂಪ್ಯೂಟರ್ ಎಂಬ ಮೂರು ‘ಸಿ’ಗಳನ್ನು ಅರಿತು ಬಳಸಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಸೌಂದರ್ಯ ಪಿ.ಮಂಜಪ್ಪ ಮಾತನಾಡಿ, 'ಪೋಷಕರು ಮಕ್ಕಳನ್ನು ಗಿಡದಂತೆ ಪೋಷಿಸಬೇಕು. ಹೇಗೆ ಗಿಡಕ್ಕೆ ನೀರು, ನೆರಳು, ಗೊಬ್ಬರದ ಜತೆಗೆ ಬೇಲಿಯೂ ಅಗತ್ಯವಿದೆಯೋ ಅದರಂತೆ ಪೋಷಕರಿರಬೇಕು' ಎಂದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೀರ್ತನ್ ಕುಮಾರ್, ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕಿ ಸುನೀತಾ ಪಿ.ಮಂಜಪ್ಪ, ಟ್ರಸ್ಟಿ ವರುಣ್ ಕುಮಾರ್, ಪ್ರಾಂಶುಪಾಲರಾದ ಸುರೇಶ ತುಂಗ, ಉಪ ಪ್ರಾಂಶುಪಾಲ ಕೃಪ ಆರ್. ದೇವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.